ತುಟಿಬಿಗಿದುಕೊಂಡಿರೆ, #ಮಿ ಟೂ ಫೇಲು

7

ತುಟಿಬಿಗಿದುಕೊಂಡಿರೆ, #ಮಿ ಟೂ ಫೇಲು

Published:
Updated:
ತುಟಿಬಿಗಿದುಕೊಂಡಿರೆ, #ಮಿ ಟೂ ಫೇಲು

ಮಿಟೂ ಅಭಿಯಾನ ಬಾಲಿವುಡ್‌ನಲ್ಲಿ ಫೇಲಾಗಲು ಕಾರಣವನ್ನು ಹುಮಾ ಖುರೇಷಿ ಇಲ್ಲಿ ವಿಶ್ಲೇಷಿಸಿದ್ದಾರೆ...

ಹಾಲಿವುಡ್‌ನಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧದ ಅಭಿಯಾನ ಮಿ ಟೂ ಯಶಸ್ವಿಯಾಗಲು ಅಲ್ಲಿಯ ಹಿರಿಯ ನಾಯಕಿಯರು ಮಾತನಾಡಿದರು. ಮುಕ್ತ ಕಂಠದಿಂದ, ಎಲ್ಲ ಬಗೆಯ ಎಲ್ಲೆಗಳನ್ನು ಬರೆದರು. ಅದು ಯಾವುದೇ ಕ್ಷೇತ್ರವಿರಲಿ, ಆ ಕ್ಷೇತ್ರದ ಹಿರಿಯರು ಸಾಥ್‌ ನೀಡದಿದ್ದರೆ ಯಾವ ಅಭಿಯಾನವೂ ಯಶಸ್ವಿಯಾಗುವುದಿಲ್ಲ.

ಬಾಲಿವುಡ್‌ನಲ್ಲಿ ಈ ಅಭಿಯಾನ ನೆಲೆಯೂರಲು ಕಾರಣವಾಗದೇ ಇರುವುದು ಸಹ ಇದೇನೆ. ಹಿರಿಯ ನಟಿಯರು ತುಟಿಬಿಗಿದು ಕೊಂಡಿದ್ದರು. ಒಂದೆ ಒಂದು ಮಾತನಾಡಲಿಲ್ಲ. ಅವರೆಲ್ಲ ಮಾತಾಡದೇ ಇದ್ದಾಗ ಕಿರಿಯರು ಬಾಯ್ಬಿಡಲು ಸಾಧ್ಯವೇ? ಲೈಂಗಿಕ ದೌರ್ಜನ್ಯದ ವಿರುದ್ಧ ಮಾತನಾಡಬೇಕೆಂದರೆ, ಧ್ವನಿಯೆತ್ತಬೇಕೆಂದರೆ ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಬೇಕು.

ಒಬ್ಬ ಯುವತಿ ಲೈಂಗಿಕ ಶೋಷಣೆಗೆ ಒಳಗಾದಾಗ, ನಮ್ಮಲ್ಲಿ ಆ ಹುಡುಗಿಯ ಚಾರಿತ್ರ್ಯವನ್ನು ಜಾಲಾಡಲಾಗುತ್ತದೆ. ಈ ಹಿಂದಿನ ಪ್ರೇಮ ವೈಫಲ್ಯಗಳು, ಸಂಬಂಧಗಳು ಎಲ್ಲವೂ ಆಚೆ ಬರುತ್ತವೆ. ಚಾರಿತ್ರ್ಯ ಹನನವಾಗುವುದಾದರೆ ಯಾವ ವ್ಯಕ್ತಿಯೂ ಅವರ ಮೇಲಿನ ಶೋಷಣೆಗೆ ಧ್ವನಿಯಾಗಲು ಇಷ್ಟ ಪಡುವುದಿಲ್ಲ. ಇಲ್ಲಿಯವರೆಗೂ ಇಲ್ಲಿ ನಡೆದಿರುವುದು ಇದೇನೆ. ಇಂಥ ಪರಿಸ್ಥಿತಿ ಇರುವವರೆಗೂ ಬಾಲಿವುಡ್‌ನಲ್ಲಿ ಮಿ ಟೂ ಆಂದೋಲನ ನೆಲೆಯೂರದು.

ಕೆಲವೇ ಕೆಲವು ಹಿರಿಯ ನಟಿಯರು ಈ ಬಗ್ಗೆ ಮಾತನಾಡಿದರು. ಆದರೆ ಅವರು ಯಾರೂ ಯಾರಿಂದ ದೌರ್ಜನ್ಯಕ್ಕೆ ಒಳಗಾದರು, ಅದು ಒಪ್ಪಂದದ ಮೇರೆಗೆ ಆದ ಶೋಷಣೆಯಾಗಿತ್ತೆ? ಇಂಥ ವಿಷಯಗಳ ಬಗ್ಗೆ ಬಾಯ್ಬಿಡಲೇ ಇಲ್ಲ.

ಇಷ್ಟಕ್ಕೂ ಶೋಷಣೆ ನಿಲ್ಲಬೇಕೆನ್ನುವುದು ಮೊದಲ ಆದ್ಯತೆಯಾಗಲಿ. ಶೋಷಿತರ ಧ್ವನಿಯಾಗುವುದು ನಂತರದ ಆದ್ಯತೆಯಾಗಲಿ. ಲೈಂಗಿಕ ದೌರ್ಜನ್ಯ ನಿಲ್ಲಬೇಕೆಂದರೆ ಮನೆಯಿಂದಲೇ ಹೆಣ್ಣುಮಕ್ಕಳನ್ನು ಗೌರವಿಸುವುದು, ಅವರ ಸಾಮರ್ಥ್ಯವನ್ನು ಸ್ವೀಕರಿಸುವ ಔದಾರ್ಯವನ್ನು ಕಲಿಸುವಂತಾಗಬೇಕು.

ಹೆಣ್ಣುಮಕ್ಕಳು ಇರುವುದೇ ಭೋಗಿಸಲು ಎಂಬಂತೆ ಗಂಡುಮಕ್ಕಳು ಬೆಳೆದರೆ, ನಾವು ಎಂದೆಂದಿಗೂ ಈ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಪ್ರಯತ್ನದಲ್ಲಿಯೇ ಇರುತ್ತೇವೆ. ನಿರ್ಮೂಲನೆಯತ್ತ ನಮ್ಮ ಹೆಜ್ಜೆ ಹಾಕುವುದೇ ಇಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry