ಶುಕ್ರವಾರ, ಏಪ್ರಿಲ್ 3, 2020
19 °C

ಮೌನ ಗೆದ್ದು ಬಂದ ರೇಡಿಯೋ ಜಾಕಿ ದುಪ್ರೇ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮೌನ ಗೆದ್ದು ಬಂದ ರೇಡಿಯೋ ಜಾಕಿ ದುಪ್ರೇ

ಪತ್ರಕರ್ತರಿಗೆ ಮಾತು, ಬರಹ, ಜ್ಞಾನವೇ ಬಂಡವಾಳ. ಇವೆರಡಲ್ಲಿ ಯಾವುದಕ್ಕೊಂದಾದರೂ ಶೂನ್ಯ ಭಾವ ಆವರಿಸಿದರೆ ಅಂತಹ ಪತ್ರಕರ್ತರು ನಿಂತ ನೀರಾಗುತ್ತಾರೆ. ಕದಿಯಲಾಗದ ಒಂದಕ್ಕೊಂದು ಪೂರಕವಾಗಿ ಬೆಸೆದುಕೊಂಡಿರುವ ಪತ್ರಕರ್ತನ ಈ ಮೂರು ಸಂಪತ್ತಲ್ಲಿ ಯಾವುದಾದರೊಂದು ಕೆಲವು ದಿನ ಸ್ಥಗಿತಗೊಂಡರೆ?

ಮುಂದಿನದ್ದನ್ನು ಊಹಿಸಲು ಅಸಾಧ್ಯ. ...ಬದುಕು ಕಷ್ಟ ಸಾಧ್ಯ ಎಂಬ ಭಾವ ಆ ಪತ್ರಕರ್ತನಲ್ಲಿ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಹೊಸತು ಕಂಡುಕೊಳ್ಳುತ್ತಾ ಹಳೆಯದರೊಂದಿಗೆ ನಂಟು ಕಾಯ್ದುಕೊಳ್ಳುವ ನಿರಂತರ ಅಭ್ಯಾಸಿ ಪತ್ರಕರ್ತನ ವೃತ್ತಿ ಬದುಕು ನಿಸ್ತೇಜ ಎನಿಸಲು ಶುರುವಾಗುತ್ತದೆ.

ಇಂತಹ ಭಯಾನಕ ಪರಿಸ್ಥಿತಿಯನ್ನು ಎದುರಿಸಿ ಕೊನೆಗೆ ಅದರಿಂದ ಹೊರಬಂದ ಒಬ್ಬ ಕಾರ್ಯನಿರತ್ ರೇಡಿಯೋ ಪತ್ರಕರ್ತ ನಮ್ಮ ನಡುವಿದ್ದಾರೆ ಅವರೇ ಅಮೆರಿಕದ ಜಮೈ ದುಪ್ರೇ..ಇವರು ವೃತ್ತಿಯಲ್ಲಿ ರೇಡಿಯೋ ಪತ್ರಕರ್ತ. ಇವರು ಕಾಕ್ಸ್ ಮೀಡಿಯಾ ಗ್ರೂಪಿನಲ್ಲಿ ರಾಜಕೀಯ ವಿಭಾಗದ ರೇಡಿಯೋ ಪತ್ರಕರ್ತ.

ರೇಡಿಯೋ ಪತ್ರಕರ್ತನಿಗೆ ಮಾತೇ ಮುತ್ತು. ಆದರೆ ದುಪ್ರೇ ಅವರು ಮೆದುಳಿನ ಸಮಸ್ಯೆಗೆ ತುತ್ತಾಗಿ ಮಾತು ಕಳೆದುಕೊಳ್ಳುತ್ತಾರೆ. ಆಗ ಅವರಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗುತ್ತದೆ. ಬದುಕಿನಲ್ಲಿ ಕತ್ತಲು ಆವರಿಸಿಕೊಳ್ಳಲು ಶುರುವಾಗುತ್ತದೆ. ಮುಂದಿನ ದಾರಿ ಕಾಣದೆ ಅಸಹಾಯಕರಾಗುತ್ತಾರೆ. ಮನಸ್ಸಿನಲ್ಲಿ ಖಾಲಿತನಕ್ಕೆ ಜಾಗ ಇರುತ್ತದೆ.

ಆಗ ಮುಳುಗುವವನಿಗೆ ತರಗೆಲೆಯೇ ಆಸರೆ ಎಂಬಂತೆ ದುಪ್ರೇ ಅವರ ನೆರವಿಗೆ ಬಂದದ್ದೇ ಸೆರೆಪ್ರಾಕ್ ಎಂಬ ಸ್ಕಾಟಿಷ್ ಕಂಪೆನಿ. ಇದು  ದುಪ್ರೇ ಅವರಿಗೆ ದನಿಯಾಯಿತು. ಪುನಃ ಇಡೀ ರಾಷ್ಟ್ರಕ್ಕೆ ದುಪ್ರೇ ಅವರ ದನಿ ಕೇಳುವಂತೆ ಮಾಡಿತು.

ಕಂಪೆನಿ ಮಾಡಿದ್ದೇನು?

ಈ ಕಂಪೆನಿ ದುಪ್ರೇ ಅವರಿಗೆ ಮೊದಲು ನ್ಯೂರಲ್ ನೆಟ್‌ವರ್ಕ್ ತರಬೇತಿ ನೀಡಿತು. ಈ ಮೂಲಕ  ಹಳೆಯ ದನಿಯನ್ನು ಬಳಸಿಕೊಂಡು ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸಿತು.

ಈ ರೀತಿಯ ವಿಧಾನದಲ್ಲಿ ಒಬ್ಬರು ಮತ್ತೊಬ್ಬರಿಗೆ ದನಿಯಾಗಬೇಕಾದರೆ ವೈಯಕ್ತಿಕವಾಗಿ 30 ಗಂಟೆಗಳಿಗೆ ಆಗುವಷ್ಟು ವಿಷಯ ಸಂಗ್ರಹ ಸಾಮರ್ಥ್ಯ ಇರಬೇಕಾಗುತ್ತದೆ.

ಸಂಗ್ರಹಿಸಿಟ್ಟ ಈ ವಿಷಯನ್ನು ಕೃತಕ ಬುದ್ಧಿಮತ್ತೆ ಬಳಸಿಕೊಳ್ಳುತ್ತದೆ. ನಂತರ ಮಾತನಾಡುವ ವ್ಯಕ್ತಿಗೆ ಬೇಕಾದ ಪದಗಳನ್ನು ಒದಗಿಸುವ ಮೂಲಕ ದನಿ ಹೊರಡಿಸುತ್ತದೆ ಅಥವಾ ವ್ಯಕ್ತಿಯ ಮಾತನ್ನು ಗ್ರಹಿಸಿಕೊಂಡು ವ್ಯಕ್ತಿಯ ಭಾಷಾ ಶೈಲಿಯನ್ನು ಅನುಕರಿಸುತ್ತದೆ

ಈ ವಿಧಾನ ಬಲು ದುಬಾರಿಯಾಗಿದ್ದು, ತಿಂಗಳಿಗೊಮ್ಮೆ ಮಾತು ಹೊರಡಿಸಲು ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ.

ಏನಿದು ನ್ಯೂರಲ್ ನೆಟ್‌ವರ್ಕ್:

ಸೆರೆಕಂಪೆನಿ ನ್ಯೂರಲ್ ನೆಟ್‌ವರ್ಕ್ ವ್ಯವಸ್ಥೆಯನ್ನು ಸ್ವಂತವಾಗಿ 2006ರಲ್ಲಿ ಅಭಿವೃದ್ಧಿ ಪಡಿಸಿತು. ಇದೀಗ ಕೃತಕ ಬುದ್ಧಮತ್ತೆ ವ್ಯವಸ್ಥೆ ಕೆಲವೇ ದಿನಗಳಲ್ಲಿ ಕಡಿಮೆ ಬೆಲೆಯಲ್ಲಿ ದನಿಯನ್ನು ಹೊರಹೊಮ್ಮಿಸುತ್ತಿದೆ. ಒಮ್ಮೆ ಬಳಕೆದಾರ ತಾನು ಮಾತನಾಡಬೇಕಾಗಿರುವುದನ್ನು ತನ್ನ ವೆಬ್‌ಸೈಟ್‌ನಲ್ಲಿ ಸಂಗ್ರಹಿಸಿಕೊಳ್ಳಬಹುದಾಗಿದೆ. ಅಷ್ಟೊಂದು ವೇಗವಾಗಿ ಹಾಗೂ ಕೈಗೆಟಕುವಂತೆ ಮಾಡುವಲ್ಲಿ ಸೆರೆಕಂಪೆನಿ ಯಶಸ್ವಿಯಾಯಿತು.

ನ್ಯೂರಲ್‌ ನೆಟ್‌ವರ್ಕ್ 8 ರಿಂದ 10 ಹಂತಗಳನ್ನು ಒಳಗೊಂಡಿದ್ದು, ಸಂಗ್ರಹವಾದ ದನಿಯು ಭಾಷಾ ವ್ಯವಸ್ಥೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ.

ಕೃತಕ ಬುದ್ಧಿಮತೆಯು ಮಾತನಾಡಲು ಅನುಕೂಲವಾಗುವ ಹಾಗೇ ಪ್ರತಿ ಪದವನ್ನು ಒಡೆದು ನೂರು ಸಣ್ಣ ಸಣ್ಣ ಪದಗಳನ್ನಾಗಿ ಒಡೆಯುತ್ತದೆ. ನಂತರ ವ್ಯಕ್ತಿಯು ಭಾಷಾ ವ್ಯವಸ್ಥೆಗೆ ಅನುಗುಣವಾಗಿ ಸಾಂದರ್ಭಿಕವಾಗಿ ಮಾತನಾಡಲು ಬೇಕಾದ ಪದಗಳನ್ನು ಒದಗಿಸುತ್ತದೆ.

ನ್ಯೂರಲ್ ನೆಟ್‌ವರ್ಕ್ ಸ್ವಂತ ಶಬ್ದಗಳನ್ನು ಸೃಷ್ಟಿಸುವ ಮೂಲಕ ಶಬ್ದಕೋಶವಾಗಿ ಕಾರ್ಯನಿರ್ವಹಿಸುತ್ತದೆ. ನಂತರ ವ್ಯಕ್ತಿಯು ಸಂಭಾಷಣೆ ನಡೆಸಲು ಬೇಕಾದ ಪದಗಳ ಸರಣಿಯನ್ನು ಒದಗಿಸುತ್ತದೆ.

ವ್ಯಕ್ತಿಯು ಚಿತ್ರಗಳನ್ನು ಗುರುತಿಸಿ ಪ್ರತಿಕ್ರಿಯಿಸುವ ಬಗ್ಗೆ ನ್ಯೂರಲ್ ನೆಟ್‌ವರ್ಕ್ ನೀಡುತ್ತಿರುವ ತರಬೇತಿಯ ಸಹಾಯದಿಂದ ಮಾನವನ ಮೆದುಳನ್ನು ಪ್ರತಿರೂಪಗೊಳಿಸಲು ಪ್ರಪಂಚದ ಹಲವು ಕಂಪ್ಯೂಟರ್ ವಿಜ್ಞಾನಿಗಳು ಪ್ರಯತ್ನಸುತ್ತಿದ್ದಾರೆ. ಆದರೆ ಶಬ್ದಗಳಿಗೆ ಕೃತಕ ಬುದ್ಧಿಮತ್ತೆಯನ್ನು ಅಳವಡಿಸುವುದಕ್ಕಿಂತ ತುಂಬಾ ಸುಲಭ ಎನ್ನುವುದು ಕಂಪೆನಿಯ ಅಭಿಪ್ರಾಯ.

ಸಣ್ಣ ಸಣ್ಣ ಸಮಸ್ಯೆಗಳಿಗೆ ಕೃತಕಬುದ್ಧಿಮತ್ತೆ ನುಕೂಲವಾಗುತ್ತದೆ. ಇದೊಂದು ಉತ್ತಮ ಪರಿಹಾರಾತ್ಮಕ ಮಾರ್.  ಅಲ್ಲದೇ ಹೊಸ ಭಾಷೆಯನ್ನು ಕಲಿಯಲು ಇದು ಬಹಳ ಉತ್ತಮ ವಿಧಾನ ಎಂದು ಸೆರೆ ಕಂಪೆನಿಯ ಅಧ್ಯಕ್ಷ ಕ್ರಿಸ್ ಪಿಡ್‌ಕಾಕ್ ಹೇಳಿದ್ದಾರೆ.

**

ಸಹಾಯ ಹಸ್ತ

ದುಪ್ರೇ ಅವರು ಕಳೆದ 35 ವರ್ಷಗಳಿಂದ ವಾಷಿಂಗ್ಟನ್ ಡಿಸಿಗೆ ಸಂಬಂಧಿಸಿದ ರಾಜಕೀಯ ವಿಷಯವನ್ನು ತಮ್ಮ ದನಿಯಿಂದ ಹೊರಡಿಸಿದ್ದರು. ಇಷ್ಟೊಂದು ಚಟುವಟಿಕೆಯಿಂದ ಇದ್ದ ದುಪ್ರೇ 201ರರಲ್ಲಿ ತಮ್ಮ ದನಿಯನ್ನು ಕಳೆದುಕೊಂಡರು. ಆದರೆ ಅದೃಷ್ಟವಶಾತ್ಅವರ ಗಂಟಲು ಮತ್ತು ಧ್ವನಿ ಪೆಟ್ಟಿಗೆಗೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೂ ಅವರ ಕಾರ್ಯವನ್ನು ಮುಂದುವರೆಸಿ ದನಿಯ ಹೊರತಾಗಿ ಬರಹದಲ್ಲಿ ತೊಡಗಿ ರಾಜಕೀಯಕ್ಕೆ ಸಂಬಂಧಿಸಿದ ವಿಷಯವನ್ನು ಸಂಗ್ರಹಿಸಿದರು. ಆದರೆ ಈತ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಸೆನೆಟ್‌ನಲ್ಲಿ ಪ್ರಸ್ತಾಪವಾಯಿತು. ಅಲ್ಲಿನ ನೆರವಿನಿಂದ ದುಪ್ರೇ ಪುನಃ ರೇಡಿಯೋ ಪತ್ರಿಕೋದ್ಯಮಿಯಾಗಿ ಮತ್ತೆ ಹೊರಹೊಮ್ಮಿದರು.ಇದು ನಾನೇ ಇದರಲ್ಲಿ ಅನುಮಾನವಿಲ್ಲ

ಅಂದರೆ ದುಪ್ರೇ ಅವರು ಕಂಪ್ಯೂಟರ್ ವ್ಯವಸ್ಥೆ ಆಧಾರಿತ ಸಂಗ್ರಹಿತ ದನಿಯ ಮೂಲಕ ಜೂನ್ 25ರಂದು ಮಾತನಾಡಲು ಶುರುಮಾಡಿದರು. ಆದರೆ ಅದು ಅವರ ಮೊದಲ ದನಿಯಾಗಿರಲಿಲ್ಲ. ಈ ಎಲ್ಲಾ ಹಂತಗಳನ್ನು ದಾಟಿ  ಏಳು ನಿಮಿಷ ಮಾತನಾಡುವಷ್ಟು ಸಮರ್ಥರಾದರು.

ಇದು ನಾನೇ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ನನ್ನ ದನಿ ಸ್ವಲ್ಪ ಮಟ್ಟಿಗೆ ಕೃತಕವಾಗಿದೆ. ಮತ್ತೆ ಈ ದನಿ ಒದಲಿನಂತಾಗುತ್ತದೆ ಎಂದು ಪ್ರಮಾಣ ಮಾಡುವುದಿಲ್ಲ ಎಂದರು.

ಸೆರೆ ಕಂಪೆನಿ ನನ್ನ ಉದ್ಯೋಗವನ್ನು ಉಳಿಸಿತು. ದುಸ್ತರವಾಗಿದ್ದ ಕುಟುಂಬದ ಆರ್ಥಿಕತೆಯನ್ನು ಸುಧಾರಿಸಿತು. ರೇಡಿಯೋ ಪತ್ರಕರ್ತರು ಮಾತನಾಡದಿದ್ದರೆ ಯಾವುದೇ ಮೌಲ್ಯವಿರುವುದಿಲ್ಲ ಎಂಬುದು ದುಪ್ರೇಯವರ ಅನುಭವದ ಮಾತು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)