ಸಂಸದನ ವಿರುದ್ಧ ಪ್ರತಿಭಟನೆ

7

ಸಂಸದನ ವಿರುದ್ಧ ಪ್ರತಿಭಟನೆ

Published:
Updated:

ಲಂಡನ್: ಚಿಕ್ಕ ಸ್ಕರ್ಟ್ ಧರಿಸುವವರ ಅನುಮತಿ ಪಡೆಯದೇ ಅವರ ಫೋಟೊ ತೆಗೆಯುವುದನ್ನು ನಿಷೇಧಿಸುವ ಕಾನೂನು ಜಾರಿಗೆ ವಿರೋಧ ವ್ಯಕ್ತಪಡಿಸಿರುವ ಕನ್ಸರ್ವೇಟಿವ್ ಪಕ್ಷದ ಸಂಸದ ಸರ್ ಕ್ರಿಸ್ಟೋಫರ್ ಚೋಪ್ ಅವರಿಗೆ ಪ್ರತಿಭಟನೆಯ ಬಿಸಿ ಎದುರಾಗಿದೆ.

ಕ್ರಿಸ್ಟೋಫರ್ ಅವರ ಕಚೇರಿಯನ್ನು ಮಹಿಳೆಯರ ಪ್ಯಾಂಟ್‌ಗಳಿಂದ ಅಲಂಕರಿಸುವ ಮೂಲಕ ಅವರ ಕಚೇರಿಯ ಸಿಬ್ಬಂದಿಯೇ ಪ್ರತಿಭಟನೆ ವ್ಯಕ್ತಪಡಿಸಿದರು.

ಸ್ಕರ್ಟ್ ಧರಿಸಿದವರ ರಹಸ್ಯ ಫೋಟೊ ತೆಗೆಯುವುದು ಶಿಕ್ಷಾರ್ಹ ಅಪರಾಧ. ಇದಕ್ಕೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಮಸೂದೆಯನ್ನು ಲಿಬರಲ್ ಡೆಮಾಕ್ರಟಿಕ್ ಪಕ್ಷದ ಸಂಸದೆ ವೆರಾ ಹೊಬ್‌ಹೌಸ್ ಅವರು ಮಂಡಿಸಿದ್ದರು. ಮಸೂದೆಗೆ ಬೆಂಬಲವಿಲ್ಲ ಎಂದು ಕ್ರಿಸ್ಟೋಫರ್ ಹೇಳಿದ್ದರು. ಇವರ ಮಾತಿಗೆ ಪ್ರಧಾನಿ ತೆರೆಸಾ ಮೇ ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry