ಪ್ರಜಾವಾಣಿ ಶೈಕ್ಷಣಿಕ ನೆರವು ಪಡೆದ ವಿದ್ಯಾರ್ಥಿಗಳ ಅನಿಸಿಕೆ

7

ಪ್ರಜಾವಾಣಿ ಶೈಕ್ಷಣಿಕ ನೆರವು ಪಡೆದ ವಿದ್ಯಾರ್ಥಿಗಳ ಅನಿಸಿಕೆ

Published:
Updated:
ಪ್ರಜಾವಾಣಿ ಶೈಕ್ಷಣಿಕ ನೆರವು ಪಡೆದ ವಿದ್ಯಾರ್ಥಿಗಳ ಅನಿಸಿಕೆ

ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಪ್ರಜಾವಾಣಿ

ಹಳ್ಳಿಯಲ್ಲಿ ಓದಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಪ್ರಜಾವಾಣಿಯ ಕೆಲಸವನ್ನು ನನ್ನ ತಂದೆ ಸದಾ ಸ್ಮರಿಸುತ್ತಾರೆ. ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಈ ವಿದ್ಯಾರ್ಥಿ ವೇತನ ಪ್ರತಿಭಾವಂತರಿಗೆ ನೆರವಾಗಲಿ.

–ಉಷಾ ಸಿ.ಜಿ., ಚೇಳೂರು, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ.

ಇನ್ನೂ ಹೆಚ್ಚು ಅಂಕ ಪಡೆಯುವ ಸಂಕಲ್ಪ

ಸ್ಕಾಲರ್ ಷಿಪ್ ಬಂದಾಗ ತುಂಬ ಖುಷಿಯಾಯಿತು. ನನ್ನಷ್ಟೇ ಓದುವರು ಈಗ ನಮ್ಮ ಕಾಲೇಜಿನಲ್ಲಿದ್ದಾರೆ. ಆದರೆ ನಾನು ಪ್ರಜಾವಾಣಿ ಸ್ಕಾಲರ್ ಷಿಪ್ ಪಡೆದು ಓದುತ್ತಿರುವುದರಿಂದ ಹೆಚ್ಚು ಅಂಕ ಪಡೆಯಬೇಕೆಂಬ ಕನಸು ಇದೆ. ನನಗೆ ಮತ್ತೊಮ್ಮೆ ಹೆಚ್ಚು ಅಂಕ ಬಂದರೆ ಮುಂದಿನ ಓದಿಗೆ ಅನುಕೂಲವಾಗಲಿದೆ. ನನಗೆ ಹೆಚ್ಚು ಅಂಕ ಬಂದಿದ್ದರಿಂದ ಗುಬ್ಬಿಯ ಶುಭೋದಯ ಕಾಲೇಜಿನಲ್ಲಿ ಉಚಿತ ಪ್ರವೇಶ ಸಿಕ್ಕಿತು. ಆದ್ದರಿಂದ ಸ್ಕಾಲರ್ ಷಿಪ್ ಹಣವನ್ನು ಪುಸ್ತಕ ಕೊಳ್ಳಲು ಉಪಯೋಗಿಸಿದೆ. ದ್ವಿತೀಯ ಪಿಯುಸಿಯಲ್ಲಿ ಉನ್ನತ ಹೆಚ್ಚು ಅಂಕ ಪಡೆದು ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಛಿಸಿದ್ದೇನೆ.

–ಮೋನಿಕಾ ಕೆ.ಎಸ್. ಅದಲಗೆರೆ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry