5
ವೇಗದ, ಬೌನ್ಸರ್‌ ಎಸೆತಗಳನ್ನು ಎದುರಿಸಲು ತಂತ್ರ

ಎನ್‌ಸಿಎನಲ್ಲಿ ಅಭ್ಯಾಸ ನಡೆಸಿದ ಮಹಿ

Published:
Updated:
ಎನ್‌ಸಿಎನಲ್ಲಿ ಅಭ್ಯಾಸ ನಡೆಸಿದ ಮಹಿ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ –ಬ್ಯಾಟ್ಸ್‌ಮನ್ ಮಹೇಂದ್ರಸಿಂಗ್ ದೋನಿ ಸೋಮವಾರ ಇಲ್ಲಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಅಭ್ಯಾಸ ನಡೆಸಿದರು.

ಬಹುತೇಕ ವೇಗದ ಮತ್ತು ಬೌನ್ಸರ್‌ ಎಸೆತಗಳನ್ನು ಎದುರಿಸುವ ಅಭ್ಯಾಸವನ್ನು ಅವರು ಮಾಡಿದರು. ಅವರಿಗೆ ಥ್ರೋ ಡೌನ್ ಪರಿಣತ ರಾಘವೇಂದ್ರ ಅವರು ಎಸೆತಗಳನ್ನು ಹಾಕಿದರು. ಮಧ್ಯಮವೇಗದ ಬೌಲರ್ ಶಾರ್ದೂಲ್ ಠಾಕೂರ್ ಕೂಡ ಬೌಲಿಂಗ್ ಮಾಡಿದರು.

ಸ್ವಲ್ಪ ಹೊತ್ತಿನ ನಂತರ ಬೌಲರ್ ಸಿದ್ಧಾರ್ಥ್ ಕೌಲ್ ಕೂಡ ನೆಟ್ಸ್‌ಗೆ ಬಂದು ಬೌಲಿಂಗ್ ಮಾಡಿದರು. ಕೌಲ್ ಈಚೆಗೆ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿ ಆಡಿದ್ದರು. ಭಾರತ ಕ್ರಿಕೆಟ್ ತಂಡವು ಇದೇ ತಿಂಗಳ ಕೊನೆಯಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ.

ಅಲ್ಲಿ ಟ್ವೆಂಟಿ–20 ಮತ್ತು ಏಕದಿನ ಸರಣಿಗಳಲ್ಲಿ ದೋನಿ ಆಡಲಿದ್ದಾರೆ. ಅಲ್ಲಿಯ ಪಿಚ್‌ಗಳು ವೇಗದ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತವೆ. ಪುಟಿದೆದ್ದು ಬರುವ ಚೆಂಡುಗಳನ್ನು ಎದುರಿಸುವ ತಾಲೀಮು ಅವಶ್ಯಕ. ಅಂತಹ ಎಸೆತಗಳನ್ನು ಆಡುವ ಅಭ್ಯಾಸವನ್ನು ಅವರು ಮಾಡಿದರು. ಒಂದನೂರಕ್ಕೂ ಹೆಚ್ಚು ಎಸೆತಗಳನ್ನು ಅವರು ಇಲ್ಲಿ ಆಡಿದರು. ಸುಮಾರು ಎರಡು ಗಂಟೆಗಳ ಕಾಲ ದೋನಿ ಅಭ್ಯಾಸ ನಡೆಸಿದರು.

ಹೋದ ಶುಕ್ರವಾರ ಇಲ್ಲಿ ನಡೆದಿದ್ದ ಯೋ ಯೋ ಟೆಸ್ಟ್‌ನಲ್ಲಿ ಮಹೇಂದ್ರಸಿಂಗ್ ದೋನಿ ಉತ್ತೀರ್ಣರಾಗಿದ್ದರು. ಆದ್ದರಿಂದ ಅವರು ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳುವ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry