7

ಲೋಚನ್ ಅಪ್ಪಣ್ಣ ಆಕರ್ಷಕ ಶತಕ

Published:
Updated:

ಬೆಂಗಳೂರು: ಲೋಚನ್ ಅಪ್ಪಣ್ಣ (114; 195ಎ, 14ಬೌಂ) ಅವರ ಶತಕ ಮತ್ತು ಅಕ್ಷಯ್‌ ಭಾರದ್ವಾಜ್‌ (43ಕ್ಕೆ4) ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಜುಪಿಟರ್‌ ಕ್ರಿಕೆಟರ್ಸ್‌ ಸಂಸ್ಥೆ ತಂಡ ಎಂ.ಎ.ಟಿ.ಆಚಾರ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌ 2ರ ಲೀಗ್‌ ಕ್ರಿಕೆಟ್‌ ಟೂರ್ನಿಯ ಎನ್‌ಗ್ರೇಡ್ಸ್‌ ಕ್ಲಬ್‌ ಎದುರಿನ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದೆ.

ಮೊದಲು ಬ್ಯಾಟ್‌ ಮಾಡಿದ ಜುಪಿಟರ್‌ ಸಂಸ್ಥೆ 84.5 ಓವರ್‌ಗಳಲ್ಲಿ 289ರನ್‌ ದಾಖಲಿಸಿತು. ಇದಕ್ಕುತ್ತರವಾಗಿ ಎನ್‌ಗ್ರೇಡ್ಸ್‌ ಕ್ಲಬ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 35.2 ಓವರ್‌ಗಳಲ್ಲಿ 115ರನ್‌ಗಳಿಗೆ ಆಲೌಟ್‌ ಆಯಿತು. ಫಾಲೊ ಆನ್‌ ಪಡೆದ ಈ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 45 ಓವರ್‌ಗಳಲ್ಲಿ 4 ವಿಕೆಟ್‌ಗೆ 196ರನ್‌ ಕಲೆಹಾಕಿತು.

ಸಂಕ್ಷಿಪ್ತ ಸ್ಕೋರ್‌: ಜುಪಿಟರ್‌ ಕ್ರಿಕೆಟರ್ಸ್‌ ಸಂಸ್ಥೆ, ಮೊದಲ ಇನಿಂಗ್ಸ್‌, 84.5 ಓವರ್‌ಗಳಲ್ಲಿ 289 (ಲೋಚನ್‌ ಅಪ್ಪಣ್ಣ 114; ಅಭಿಜಿತ್‌ 39ಕ್ಕೆ3).

ಎನ್‌ಗ್ರೇಡ್ಸ್‌ ಕ್ಲಬ್‌: ಪ್ರಥಮ ಇನಿಂಗ್ಸ್‌, 35.2 ಓವರ್‌ಗಳಲ್ಲಿ 115 (ಅಕ್ಷಯ್‌ ಭಾರದ್ವಾಜ್‌ 43ಕ್ಕೆ4, ಜೆ.ಮನೋಜ್‌ ಕುಮಾರ್‌ 18ಕ್ಕೆ3). ಮತ್ತು  ದ್ವಿತೀಯ ಇನಿಂಗ್ಸ್‌, 45 ಓವರ್‌ಗಳಲ್ಲಿ 4 ವಿಕೆಟ್‌ಗೆ 196 (ಸಂಪ್ರೀತ್‌ ಆರ್‌ ಶೆಟ್ಟಿ 68). ಫಲಿತಾಂಶ: ಡ್ರಾ.

ವಿಶ್ವೇಶ್ವರಪುರಂ ಕ್ಲಬ್‌ (2): ಮೊದಲ ಇನಿಂಗ್ಸ್‌, 85.4 ಓವರ್‌ಗಳಲ್ಲಿ 250 (ಫರ್ಹಾನ್‌ ಮಾಗಿ 50; ಕೆ.ಮಹೇಶ್‌ 38ಕ್ಕೆ4). ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌: 73.5 ಓವರ್‌ಗಳಲ್ಲಿ 264 (ಬಿ.ರುತುರಾಜ್‌ 58, ಕೆ.ಬಿ.ವಾದ್ವಾ 77ಕ್ಕೆ5). ಫಲಿತಾಂಶ: ಡ್ರಾ.

ರಾಜಾಜಿನಗರ ಕ್ರಿಕೆಟರ್ಸ್‌: ಮೊದಲ ಇನಿಂಗ್ಸ್, 61.2 ಓವರ್‌ಗಳಲ್ಲಿ 184 (ಎಂ.ನಿದೀಶ್‌ 69; ಅರ್ಶ್‌ದೀಪ್‌ ಸಿಂಗ್‌ ಬ್ರಾರ್‌ 73ಕ್ಕೆ5).

ಕೇಂಬ್ರಿಡ್ಜ್‌ ಕ್ಲಬ್‌: ಪ್ರಥಮ ಇನಿಂಗ್ಸ್‌, 51.4 ಓವರ್‌ಗಳಲ್ಲಿ 6 ವಿಕೆಟ್‌ಗೆ 190 (ರಾಜೂ ಭಟ್ಕಳ್‌ 61; ಎಂ.ಸಿ.ಕರಣ್‌ 57ಕ್ಕೆ3). ‍ಫಲಿತಾಂಶ: ಡ್ರಾ.

ವಿಜಯ ಕ್ಲಬ್‌: ಪ್ರಥಮ ಇನಿಂಗ್ಸ್‌, 63 ಓವರ್‌ಗಳಲ್ಲಿ 113 (ಎಸ್‌.ಅಭಿಜಿತ್‌ 57; ತಾನಿಷ್‌ ಮಹೇಶ್‌ 26ಕ್ಕೆ4).

ದೂರವಾಣಿ ಕ್ರಿಕೆಟರ್ಸ್‌ (1): ಮೊದಲ ಇನಿಂಗ್ಸ್‌, 25.2 ಓವರ್‌ಗಳಲ್ಲಿ 3 ವಿಕೆಟ್‌ಗೆ 77 (ಪ್ರಜ್ವಲ್‌ ಪವನ್‌ 45). ಫಲಿತಾಂಶ: ಡ್ರಾ.

ಮಾಡರ್ನ್ ಕ್ಲಬ್‌: ಪ್ರಥಮ ಇನಿಂಗ್ಸ್‌, 48.1 ಓವರ್‌ಗಳಲ್ಲಿ 143 (ಗೌತಮ್‌ ಸಾಗರ್‌ 87; ಡಿ.ಭರತ್‌ 26ಕ್ಕೆ4). ಮತ್ತು ದ್ವಿತೀಯ ಇನಿಂಗ್ಸ್‌, 69 ಓವರ್‌ಗಳಲ್ಲಿ 8 ವಿಕೆಟ್‌ಗೆ 185 (ಗೌತಮ್‌ ಸಾಗರ್‌ 87). ದಿ ಬೆಂಗಳೂರು ಕ್ರಿಕೆಟರ್ಸ್‌: ಪ್ರಥಮ ಇನಿಂಗ್ಸ್‌, 65.2 ಓವರ್‌ಗಳಲ್ಲಿ 9 ವಿಕೆಟ್‌ಗೆ 321 ಡಿಕ್ಲೇರ್ಡ್‌ (ಸಚಿನ್‌ ಆರ್‌ ಗಣಕಲ್‌ 65, ಕೆ.ಬಿ.ಶ್ರೇಯಸ್‌ 67). ಫಲಿತಾಂಶ: ಡ್ರಾ.

ಜವಾಹರ ಸ್ಪೋರ್ಟ್ಸ್‌ ಕ್ಲಬ್‌ (2): ಪ್ರಥಮ ಇನಿಂಗ್ಸ್‌, 49.3 ಓವರ್‌ಗಳಲ್ಲಿ 159 (ಎಸ್.ಎಂ.ರಾಜ್‌ಕುಮಾರ್‌ 55; ಪ್ರಣವ್‌ ಭಾಟಿಯಾ 29ಕ್ಕೆ6).

ಚಿಂತಾಮಣಿ ಸ್ಪೋರ್ಟ್ಸ್‌ ಸಂಸ್ಥೆ, ಚಿಂತಾಮಣಿ: ಪ್ರಥಮ ಇನಿಂಗ್ಸ್‌, 16.5 ಓವರ್‌ಗಳಲ್ಲಿ 2 ವಿಕೆಟ್‌ಗೆ 89 (ಸರ್ಫರಾಜ್‌ ಎಂ.ಇಲಾಬಾದ್‌ ಔಟಾಗದೆ 51). ಫಲಿತಾಂಶ: ಡ್ರಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry