7

ಬೆಲ್ಜಿಯಂ ತಂಡಕ್ಕೆ ಮಣಿದ ಪನಾಮ

Published:
Updated:
ಬೆಲ್ಜಿಯಂ ತಂಡಕ್ಕೆ ಮಣಿದ ಪನಾಮ

ಸೋಚಿ: ರೊಮೆಲು ಲುಕಾಕು ಗಳಿಸಿದ ಎರಡು ಗೋಲುಗಳ ನೆರವಿನಿಂದ ಬೆಲ್ಜಿಯಂ ತಂಡ 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಫಿಶ್ತ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಜಿ’ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ 3–0 ಗೋಲುಗಳಿಂದ ಪನಾಮ ತಂಡವನ್ನು ಸೋಲಿಸಿತು.

3–4–2–1ರ ಯೋಜನೆಯೊಂದಿಗೆ ಕಣಕ್ಕಿಳಿದಿದ್ದ ಬೆಲ್ಜಿಯಂ ತಂಡ ಆರಂಭದಿಂದಲೇ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸಲು ಮುಂದಾಯಿತು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ  55ನೇ ಸ್ಥಾನದಲ್ಲಿರುವ ಪನಾಮ ಕೂಡ ಮಿಂಚಿತು. ಹೀಗಾಗಿ ಮೊದಲ 40 ನಿಮಿಷಗಳ ಅವಧಿಯಲ್ಲಿ ಯಾವ ತಂಡಕ್ಕೂ ಗೋಲು ದಾಖಲಿಸಲು ಆಗಲಿಲ್ಲ. ನಂತರ ಬೆಲ್ಜಿಯಂ ವೇಗದ ಆಟಕ್ಕೆ ಮುಂದಾಯಿತು. ಈ ತಂಡದ ಪ್ರಯತ್ನಕ್ಕೆ 47ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಡ್ರಿಯಾಸ್‌ ಮೆರ್ಟೆನ್ಸ್‌ ಅಮೋಘ ರೀತಿಯಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಹಜಾರ್ಡ್‌ ಪಡೆಯ ಸಂಭ್ರಮಕ್ಕೆ ಕಾರಣರಾದರು.

ದ್ವಿತೀಯಾರ್ಧದಲ್ಲೂ ಬೆಲ್ಜಿಯಂ ತಂಡ ಪಾರಮ್ಯ ಮೆರೆಯಿತು. ರೊಮೆಲು ಲುಕಾಕು 69 ಮತ್ತು 75ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ಪನಾಮ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry