‘ಬರ-ನೆರೆ ಪರಿಹಾರ: ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವೆ’

7

‘ಬರ-ನೆರೆ ಪರಿಹಾರ: ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವೆ’

Published:
Updated:

ನವದೆಹಲಿ: ರಾಜ್ಯ ಅವಗಢ ಪರಿಹಾರ ನಿಧಿಯಡಿ ಬರ-ನೆರೆ ನಿರ್ವಹಣೆಗೆಂದು ರಾಜ್ಯಕ್ಕೆ ನೆರವು ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಭರವಸೆ ನೀಡಿದ್ದಾರೆ.

ಈ ಬಾಬ್ತಿನಲ್ಲಿ ರಾಜ್ಯಕ್ಕೆ 2015-2019ರ ನಡುವೆ ದೊರೆತಿರುವ ನೆರವಿನ ಮೊತ್ತ ಕೇವಲ ₹1,527 ಕೋಟಿ ಎಂಬ ಸಂಗತಿಯತ್ತ ಗಮನ ಸೆಳೆದಾಗ ಅವರು ಆಶ್ಚರ್ಯ ಪ್ರಕಟಿಸಿದ್ದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದೇ ಅವಧಿಯಲ್ಲಿ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಗುಜರಾತಿಗೆ ಅನುಕ್ರಮವಾಗಿ ₹ 8,195 ಕೋಟಿ, ₹ 6.094 ಕೋಟಿ, ₹ 4,847 ಕೋಟಿ ಹಾಗೂ ₹ 3,394 ಕೋಟಿ ದೊರೆತಿದೆ. ಬರಗಾಲ ತಡೆ ಕ್ರಮಗಳ ಜಾರಿಗೆ ₹12,272 ಕೋಟಿ ನೆರವಿಗೆ 2016ರ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಸಮಗ್ರ ಮನವಿ ಸಲ್ಲಿಸಿದ್ದ ಸಂಗತಿಯನ್ನು ವಿವರಿಸಲಾಯಿತು ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ-48ರ ಹಾಸನ- ಚನ್ನರಾಯಪಟ್ಟಣ ಭಾಗದಲ್ಲಿ ಈಗಿನ ಎರಡು ಪಥಗಳ ಬದಲಿಗೆ ನಾಲ್ಕು ಪಥಗಳನ್ನು ತಕ್ಷಣವೇ ನಿರ್ಮಿಸಿ ಅಪಘಾತಗಳನ್ನು ತಡೆಯಬೇಕು. ಇದೇ ಹೆದ್ದಾರಿಯ ನೆಲಮಂಗಲ- ಹಾಸನ ಮಾರ್ಗದಲ್ಲಿ ಎರಡು ಪಥಗಳ ಸರ್ವೀಸ್ ರಸ್ತೆ ನಿರ್ಮಿಸಬೇಕು ಎಂದು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿಕೊಳ್ಳಲಾಯಿತು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry