ಪಿಯು ಉಪನ್ಯಾಸಕರ ಸಂಬಳ ತಡೆ ಹಿಡಿಯದಂತೆ ಆಗ್ರಹ

7

ಪಿಯು ಉಪನ್ಯಾಸಕರ ಸಂಬಳ ತಡೆ ಹಿಡಿಯದಂತೆ ಆಗ್ರಹ

Published:
Updated:

ಹುಬ್ಬಳ್ಳಿ: ‘ರಾಜ್ಯದ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ, ಬಿ.ಇಡಿ ಪದವಿ ಪೂರ್ಣಗೊಳಿಸದ ಉಪನ್ಯಾಸಕರ ಸಂಬಳವನ್ನು ತಡೆ ಹಿಡಿಯಲಾಗಿದೆ. ಅವರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವವರೆಗೂ ಸಂಬಳ ತಡೆ ಹಿಡಿಯದಂತೆ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಎನ್‌. ಮಹೇಶ ಅವರಿಗೆ ಶಾಸಕ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ.

ಎನ್‌.ಸಿ.ಇ.ಆರ್‌.ಟಿ. ನಿಯಮಾವಳಿ ಪ್ರಕಾರ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಬಿ.ಇಡಿ. ಪದವಿ ಪಡೆದಿರಬೇಕು. ಈ ನಿಯಮವನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದು, ಅವರಿಗೆ ನಾಲ್ಕು ವರ್ಷ ಕಾಲಾವಕಾಶ ನೀಡಲಾಗಿತ್ತು. ಆದರೆ, ರಜೆ ಹಾಗೂ ಶಿಷ್ಯವೇತನ ನೀಡಲು ಸಾಧ್ಯವಿಲ್ಲದ್ದರಿಂದ ಉಪನ್ಯಾಸಕರಿಗೆ ಬಿ.ಇಡಿ ಅಧ್ಯಯನ ಮಾಡಲು ಸಾಧ್ಯವಾಗಿಲ್ಲ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಅಂಚೆ ತೆರಪಿನ ಮೂಲಕ ಶಿಕ್ಷಣ ಪಡೆಯಬೇಕೆಂದರೆ ಡಿ.ಇಡಿ ಅಧ್ಯಯನ ಮಾಡಿರಬೇಕು ಎಂದಿದೆ. ಬಿ.ಇಡಿ ಪದವಿ ಹೊಂದಿರದಿದ್ದರೂ ಹುದ್ದೆಗಳಿಗೆ ವೇತನಾನುದಾನ ನೀಡಿರುವುದರಿಂದ ಸರ್ಕಾರವೂ ಹೊಣೆಯಾಗಿದೆ. ಅವರು ವೇತನ ಬಡ್ತಿಯಿಂದಲೂ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆದು, ಪರಿಹಾರ ಕಂಡು ಹಿಡಿಯಬೇಕು ಎಂದು ಹೊರಟ್ಟಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry