ಪಾಕ್‌ ಪರ ಹಾಡು: ಬಂಧನ

7

ಪಾಕ್‌ ಪರ ಹಾಡು: ಬಂಧನ

Published:
Updated:

ಪಟ್ನಾ: ಪಾಕಿಸ್ತಾನ ಪರ ಹಾಡಿರುವ ವಿಡಿಯೊ ವೈರಲ್‌ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹ್ತಾಸ್‌ ಜಿಲ್ಲೆಯಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ.

ಕಳೆದ ಶನಿವಾರ ನಾಸ್ರಿಗ್ನಾಜ್ ಗ್ರಾಮದಲ್ಲಿ ನಡೆದ ಈದ್‌ ಆಚರಣೆಯ ಸಂದರ್ಭದಲ್ಲಿ ಗುಂಪೊಂದು ಪಾಕಿಸ್ತಾನ ಪರವಾಗಿ ಹಾಡು ಹಾಡಿತ್ತು. ಈ ವಿಡಿಯೊ ವೈರಲ್‌ ಆದ ನಂತರ 20 ಮಂದಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ವಿಡಿಯೊವನ್ನು ‌‌‌‌ಪಟ್ನಾದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದೆ. ಬಂಧಿತರಲ್ಲಿ ಕೆಲವರು 15ರಿಂದ 17 ವರ್ಷದ ಒಳಗಿನವರು. ಅವರನ್ನು ಬಾಲಾಪರಾಧಿಗಳ ನ್ಯಾಯಮಂಡಳಿಗೆ ಕಳುಹಿಸಲಾಗಿದೆ. ಉಳಿದವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry