7
ದೇಶದಲ್ಲಿ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆ: ಕ್ರಿಸಿಲ್‌ ವರದಿ

ವಾಹನ ಉದ್ದಿಮೆ:ಹೂಡಿಕೆ ಹೆಚ್ಚಳ ನಿರೀಕ್ಷೆ

Published:
Updated:
ವಾಹನ ಉದ್ದಿಮೆ:ಹೂಡಿಕೆ ಹೆಚ್ಚಳ ನಿರೀಕ್ಷೆ

ಮುಂಬೈ:  ಮುಂದಿನ ಎರಡು ವರ್ಷಗಳಲ್ಲಿ ವಾಹನ ತಯಾರಿಕಾ ಸಂಸ್ಥೆಗಳ ಬಂಡವಾಳ ಹೂಡಿಕೆಯು ಶೇ 30ರಷ್ಟು ಹೆಚ್ಚಳಗೊಂಡು ₹ 58 ಸಾವಿರ ಕೋಟಿಗಳಿಗೆ ತಲುಪಲಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಮತ್ತು ಮಾಲಿನ್ಯ ನಿಯಂತ್ರಣ ಕ್ರಮಗಳೂ ಸೇರಿದಂತೆ ಇತರ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಈ ಪ್ರಮಾಣದ ಹೂಡಿಕೆ ಅಗತ್ಯ ಇದೆ ಎಂದು ‘ಕ್ರಿಸಿಲ್‌’ ವರದಿಯಲ್ಲಿ ಹೇಳಲಾಗಿದೆ.

‘ಈ ₹ 58 ಸಾವಿರ ಕೋಟಿ ಹೂಡಿಕೆಯ ಅರ್ಧದಷ್ಟು ಮೊತ್ತವು ತಯಾರಿಕಾ ಸಾಮರ್ಥ್ಯ ಹೆಚ್ಚಿಸಲು ಬಳಕೆಯಾಗಲಿದೆ. ಉಳಿದ ಮೊತ್ತವು ಹೊಸ ವಾಹನಗಳ ಅಭಿವೃದ್ಧಿ, ತಂತ್ರಜ್ಞಾನ ಬಳಕೆಗೆ ವೆಚ್ಚವಾಗಲಿದೆ. ಪ್ರಯಾಣಿಕರ ವಾಹನ ತಯಾರಕರ ಪಾಲು ಶೇ 70ರಷ್ಟು, ಶೇ 20 ವಾಣಿಜ್ಯ ವಾಹನ ಮತ್ತು ಶೇ 10ರಷ್ಟು ದ್ವಿಚಕ್ರ ವಾಹನ ತಯಾರಕರ ಪಾಲು ಇರಲಿದೆ’ ಎಂದು ಕ್ರಿಸಿಲ್‌ನ ಹಿರಿಯ ನಿರ್ದೇಶಕ ಅನುಜ್ ಸೇಠಿ ಹೇಳಿದ್ದಾರೆ.

‘ದೇಶಿ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಮುಂಚೂಣಿ ಸಂಸ್ಥೆಗಳಾದ ಮಾರುತಿ ಮತ್ತು ಹುಂಡೈಗಳು ತಮ್ಮ ರಫ್ತು ವಹಿವಾಟನ್ನು ಕಡಿಮೆ ಮಾಡಲಿವೆ. 2020ರವರೆಗೆ ವಾಹನಗಳ ಮಾರಾಟವು ಗರಿಷ್ಠ ಮಟ್ಟದಲ್ಲಿ ಇರಲಿದೆ. ಇದಕ್ಕೆ ಕುಟುಂಬಗಳ ವೆಚ್ಚ ಮಾಡಬಹುದಾದ ಆದಾಯದಲ್ಲಿನ ಏರಿಕೆ, ಕೈಗಾರಿಕೆ ಮತ್ತು ಗ್ರಾಮೀಣ ಆರ್ಥಿಕ ಚಟುವಟಿಕೆಗಳಲ್ಲಿನ ಹೆಚ್ಚಳ ಕಾರಣವಾಗಿರಲಿದೆ.

ಸ್ಪರ್ಧೆ ಹೆಚ್ಚುತ್ತಿರುವುದರಿಂದ ಹೊಸ ಮಾದರಿಗಳನ್ನು ಪರಿಚಯಿಸಲು, ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆಗೆ ಗಮನ ಕೇಂದ್ರಿಕರಿಸುವುದು ಅನಿವಾರ್ಯವಾಗಿರಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ, ಪ್ರಯಾಣಿಕರ ವಾಹನ ವಿಭಾಗದಲ್ಲಿ 8 ಹೊಸ ಮಾದರಿಗಳು ಮಾರುಕಟ್ಟೆ ಪ್ರವೇಶಿಸಲಿವೆ ಎಂದು ಅಂದಾಜಿಸಲಾಗಿದೆ.

ವಾಹನ ಮಾಲಿನ್ಯ ನಿಯಂತ್ರಣ ಮಾನದಂಡವಾದ ‘ಬಿಎಸ್‌–6’ ಪಾಲಿಸುವುದು ಮತ್ತು ಅಪಘಾತ ತಡೆ ಪರೀಕ್ಷಾ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಕೂಡ ಸಾಕಷ್ಟು ಮೊತ್ತ ತೆಗೆದು ಇರಿಸಬೇಕಾಗಿದೆ. ಗಮನಾರ್ಹ ಮೊತ್ತವನ್ನು ಹೂಡಿಕೆ ಮಾಡಿದರೂ ವಾಹನ ತಯಾರಿಕಾ ಸಂಸ್ಥೆಗಳ ಹಣಕಾಸು ಪರಿಸ್ಥಿತಿ ಸದೃಢವಾಗಿ ಇರಲಿದೆ ಎಂದೂ ಕ್ರಿಸಿಲ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry