ಆಹಾರ ಪದಾರ್ಥದಿಂದಲೇ ತಟ್ಟೆ, ಚಮಚ ತಯಾರಿಕೆ

7

ಆಹಾರ ಪದಾರ್ಥದಿಂದಲೇ ತಟ್ಟೆ, ಚಮಚ ತಯಾರಿಕೆ

Published:
Updated:
ಆಹಾರ ಪದಾರ್ಥದಿಂದಲೇ ತಟ್ಟೆ, ಚಮಚ ತಯಾರಿಕೆ

ಬೆಂಗಳೂರು: ಇನ್ನು ಮುಂದೆ ಊಟ ಮಾಡಲು ಬಳಸುವ ಚಮಚ, ತಟ್ಟೆ, ಬಟ್ಟಲುಗಳನ್ನು ಶುಚಿಗೊಳಿಸಬೇಕಾದ ಅಗತ್ಯವಿಲ್ಲ. ಆಹಾರ ಸೇವಿಸಿದ ನಂತರ ನೀವು ಅವುಗಳನ್ನೂ ತಿನ್ನಬಹುದು!

ಹೌದು. ಗಜಮುಖ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಯವರು ತಿನ್ನುವಂತಹ ಪದಾರ್ಥಗಳಿಂದಲೇ ಸಾಮಗ್ರಿಗಳನ್ನು ತಯಾರಿಸುವ ಘಟಕವನ್ನು ಯಲಹಂಕ ಸಮೀಪದ ಪಾಲನಹಳ್ಳಿ ಗ್ರಾಮದಲ್ಲಿ ಆರಂಭಿಸಿದ್ದಾರೆ.

‘ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ತಡೆಗಟ್ಟಬೇಕೆಂಬ ಉದ್ದೇಶದಿಂದ ಬೇಳೆಕಾಳುಗಳು, ಸಿರಿಧಾನ್ಯ ಮತ್ತು ಇತರ ಆಹಾರ ಪದಾರ್ಥಗಳಿಂದ ತಟ್ಟೆ, ಬಟ್ಟಲು, ಚಮಚಗಳನ್ನು ತಯಾರಿಸಿದ್ದೇವೆ. ಇವುಗಳನ್ನು ಬಳಸಿ ಬಿಸಾಡುವ ಅಗತ್ಯವಿಲ್ಲ’ ಎಂದು ಸಂಸ್ಥೆಯ ಸಹ ಸಂಸ್ಥಾಪಕಿ ಲಕ್ಷ್ಮಿ ಭೀಮಾಚಾರ್ ಹೇಳಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry