ಗೋದಾಮಿಗೆ ಬೆಂಕಿ: ₹50 ಲಕ್ಷ ನಷ್ಟ

7

ಗೋದಾಮಿಗೆ ಬೆಂಕಿ: ₹50 ಲಕ್ಷ ನಷ್ಟ

Published:
Updated:
ಗೋದಾಮಿಗೆ ಬೆಂಕಿ: ₹50 ಲಕ್ಷ ನಷ್ಟ

ಬೆಳಗಾವಿ: ಜಿಲ್ಲೆಯ ಸವದತ್ತಿಯ ಎಪಿಎಂಸಿ ಪ್ರಾಂಗಣದಲ್ಲಿದ್ದ ಅಶೋಕ ಕಾಟನ್ ಟ್ರೇಡಿಂಗ್ ಗೋದಾಮುವಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು ₹ 50 ಲಕ್ಷ ಮೊತ್ತದ ಹತ್ತಿ, ಗೋವಿನ ಜೋಳ ಹಾಗೂ ಕಡಲೆ ಸುಟ್ಟು ಕರಕಲಾಗಿದೆ.

ಸೋಮವಾರ ಮಧ್ಯರಾತ್ರಿ ಬೆಂಕಿ ಹೊತ್ತಿಕೊಂಡಿದ್ದು, ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ವಾಯುವಿಹಾರಕ್ಕೆ ಹೋದವರು ನೋಡಿ, ಅಗ್ನಿಶಾಮಕ ದಳದ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ, ಬೆಂಕಿ ನಂದಿಸಿದರು.

ಬೆಂಕಿ ಹೊತ್ತಿಕೊಳ್ಳಲು ಏನು ಕಾರಣವೆನ್ನುವುದು ತಿಳಿದುಬಂದಿಲ್ಲ.

ಗೋದಾಮು ಅಶೋಕ ಚೋಪ್ರಾ ಎಂಬುವರಿಗೆ ಸೇರಿದೆ. 1,000 ಕ್ವಿಂಟಲ್ ಹತ್ತಿ, 400 ಕ್ವಿಂಟಲ್ ಗೋವಿನ ಜೋಳ ಹಾಗೂ 20 ಕ್ವಿಂಟಲ್ ಕಡಲೆ ಸುಟ್ಟು ಕರಲಾಗಿದೆ ಎಂದು ಹೇಳಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry