ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವನದಲ್ಲಿ ನಿರಂತರ ಕಲಿಯುವಿಕೆ ಅಗತ್ಯ’

Last Updated 19 ಜೂನ್ 2018, 9:01 IST
ಅಕ್ಷರ ಗಾತ್ರ

ಕಾರ್ಕಳ: ಜೀವನದಲ್ಲಿ ನಿರಂತರ ಕಲಿಯುವಿಕೆ ಅಗತ್ಯ ಎಂದು ಕಾರ್ಕಳದ ಹೃದಯ ತಜ್ಞ ವೈದ್ಯ ಡಾ.ಪ್ರಕಾಶ ಶೆಣೈ ತಿಳಿಸಿದರು.

ನಗರದ ಅನಂತಶಯನದ ಹೋಟೆಲ್ ಪ್ರಕಾಶ್‌ನ ಸಂಭ್ರಮ ಸಭಾಭವನದಲ್ಲಿ ಭಾನುವಾರ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಹಾಗೂ ರೋಟರಿ ಕ್ಲಬ್ ಇವುಗಳ ಸಹಭಾಗಿತ್ವದಲ್ಲಿ ಭಾನುವಾರ ಆಯೋಜಿಸಲಾದ 11ನೆಯ ವರ್ಷದ ಅಂತರ್ ಜಿಲ್ಲಾ ಮಟ್ಟದ ಮುಕ್ತ ರ್‍ಯಾಪಿಡ್ ಚೆಸ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಾಸರಗೋಡು, ಚಿಕ್ಕಮಗಳೂರುಗಳಿಂದ ಒಟ್ಟು 238 ಆಟಗಾರರು ಭಾಗವಹಿಸಿದ್ದರು.

ಫಲಿತಾಂಶ ವಿವರ: ಮುಕ್ತ ವಿಭಾಗ- 1. ಡಬ್ಲೂ.ಸಿ.ಎಂ. ಇಶಾ ಶರ್ಮಾ, ದ.ಕ. 2. ದೇವಿದಾಸ್ ಸುರೇಶ್ ಪೈ, ಉಡುಪಿ. 3. ಚಿರಾಗ್ ಹಿರಿಂಜಾ ಜಿ. ಜೆ., ದ.ಕ. 4. ಪ್ರಶಾಂತ್ ಜೆ. ನೈಕ್, ದ.ಕ. ಅತ್ಯುತ್ತಮ ಮಹಿಳಾ ಆಟಗಾರ್ತಿ - ಸಿರಿ ಶರ್ಮಾ, ದ.ಕ. ಅತ್ಯುತ್ತಮ ಹಿರಿಯ ಆಟಗಾರ - ದಿವಾಕರ್ ಎಸ್., ದ.ಕ.

16 ವರ್ಷ ವಯೋಮಿತಿ ಬಾಲಕರ ವಿಭಾಗ– 1 ಪ್ರಜ್ವಲ್ ನಾಯಕ್, ಉಡುಪಿ. 2. ಮನಿಶ್ ಜಿ. ಶ್ರಿಯಾನ್, ಉಡುಪಿ. 3. ಜೇಸನ್ ಲಾರೆನ್ಸ್ ಪಿಂಟೋ, ಉಡುಪಿ. 4. ಆಯೂಶ್ ಬೋಳೂರ್, ದ.ಕ. ಬಾಲಕಿಯರ ವಿಭಾಗ : 1. ಯಶಸ್ವಿ ಕೆ, ದ.ಕ. 2. ಸುಹೇನಾ ಸುಮಾ ದರ್ಶನ್, ದ.ಕ. 3. ಕೀರ್ತನಾ ಸಾಲಿಯಾನ್, ಉಡುಪಿ. 4. ದಿವ್ಯಾ, ಉಡುಪಿ

14 ವರ್ಷ ವಯೋಮಿತಿಯ ಬಾಲಕರ ವಿಭಾಗ : 1. ಶ್ರೀಗಣೇಶ್, ದ.ಕ. 2. ಪ್ರದ್ಯುಮ್ನ ವಿ. ಶೆಟ್ಟಿ, ದ.ಕ. 3. ನಿಖಿಲ್ ಧ್ಯಾನ್ ಆರ್., ದ.ಕ. 4. ಅನೂಪ್ ಎ. ರಾವ್., ದ.ಕ.

ಬಾಲಕಿಯರ ವಿಭಾಗ : 1. ಪ್ರಿಯದರ್ಶಿನಿ ಮುಲ್ಲೋಳಿ, ದ.ಕ. 2. ಗಾನಸಮೃದ್ಧಿ ಕೆ., ಕಾಸರಗೋಡು. 3. ಶುಭಪ್ರದ ಕೆ.ಎಸ್., ದ.ಕ. 4. ಶುಭಶ್ರೀ ಕೆ., ದ.ಕ.

12 ವರ್ಷ ವಯೋಮಿತಿಯ ಬಾಲಕರ ವಿಭಾಗ : 1. ಕಾರ್ತಿಕ್ ಆರ್., ಉಡುಪಿ. 2. ಸಸ್ಮಿತ್ ಎ. ಸುವರ್ಣ, ಉಡುಪಿ. 3. ನಿಖಿಲ್ ವಿಕ್ರಮ್ ಕೆ.ಎಸ್., ಉಡುಪಿ. 4. ಶಿವಚೇತನ್ ಹಳಮನೆ, ದ.ಕ. ಬಾಲಕಿಯರ ವಿಭಾಗ : 1.ಯಶಸ್ವಿ ನಾಡ, ಉಡುಪಿ. 2. ದೀಪ್ತಿ ನಾಯಕ್, ಉಡುಪಿ. 3. ರಿಯಾನಾ ಸೊನಾಲಿ ಪಿಂಟೊ, ದ.ಕ. 4. ಶಾನ್ವಿ ಎಸ್. ಬಲ್ಲಾಳ್, ಉಡುಪಿ.

10 ವರ್ಷ ವಯೋಮಿತಿಯ ಬಾಲಕರ ವಿಭಾಗ : 1. ಆಯೂಶ್ ಕೆ. ಪಿ., ದ.ಕ. 2. ನಿನಾದ ಎಸ್. ಎ., ದ.ಕ. 3. ತತ್ವ ಶೆಟ್ಟಿ, ಉಡುಪಿ. 4. ರವೀಶ್ ಕೋಟೆ, ದ.ಕ. ಬಾಲಕಿಯರ ವಿಭಾಗ : 1. ಮೇಧಾ ಜಿ. ಭಟ್, ದ.ಕ. 2. ಅದಿತಿ ಸುರೇಶ್, ದ.ಕ. 3. ವಂದ್ಯಾ ಪ್ರಭು ಜಿ., ದ.ಕ. 4. ರಿಶಾಲ್ ಡಿಸೌಜಾ.

8 ವರ್ಷ ವಯೋಮಿತಿಯ ಬಾಲಕರ ವಿಭಾಗ: 1. ಆಕಾಂಕ್ಷ ಯು. ಡಿ., ದ.ಕ. 2. ಆಯೂಷ್ ಹೆಗ್ಡೆ, ತೀರ್ಥಳ್ಳಿ. 3. ಆಯುಷ್ಮಾನ್ ಟೈಲರ್, ದ.ಕ., 4. ಒಸ್ವಿನ್ ಜೋಶುವಾ ಡಿಮೆಲ್ಲೊ, ದ.ಕ. ಬಾಲಕಿಯರ ವಿಭಾಗ : 1. ಅನ್ಸಿಕಾ ಶೆರಿಲ್ ಪಿಂಟೊ, ದ.ಕ. 2. ಪಾವನಿ ಆರ್., ತೀರ್ಥಳ್ಳಿ. 3. ಐಶಾನಿ, ದ.ಕ., 4. ರಿಶೋನಾ ಸಾನ್ಸಿಯಾ ಪಿಂಟೊ, ದ.ಕ.

ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಇದರ ಅಧ್ಯಕ್ಷ ಡಾ. ರಾಜಗೋಪಾಲ್ ಶೆಣೈ, ಕಾರ್ಯದರ್ಶಿ ಜಗದೀಶ್ ಆಚಾರ್ಯ, ಡಾ. ಪ್ರಕಾಶ್ ಶೆಣೈ ಹಾಗೂ ಪಂದ್ಯಾಟದ ನಿರ್ದೇಶಕ ದೀಪಕ್ ಪೈ ವಿಜೇತರಿಗೆ ಬಹುಮಾನ ವಿತರಿಸಿದರು. ರಾಷ್ಟ್ರೀಯ ನಿರ್ಣಾಯಕ ಸಾಕ್ಷಾತ್ ಯು. ಕೆ., ಸೌಂದರ್ಯ ಯು.ಕೆ. ತೀರ್ಪುಗಾರರಾಗಿ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT