ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಸರ ಸಂರಕ್ಷಣೆಗೆ ಕೈಜೋಡಿಸಿ’

Last Updated 19 ಜೂನ್ 2018, 10:40 IST
ಅಕ್ಷರ ಗಾತ್ರ

ಇಳಕಲ್: ‘ಸಸಿಗಳನ್ನು ನೆಡಲು ಸಕಾಲವಾಗಿರುವ ಈ ಸಂದರ್ಭದಲ್ಲಿ ನಗರದ ಹಸಿರೀಕರಣಕ್ಕೆ ಸೋಸಿಯೂತ್ಸ್ ಸಂಸ್ಥೆಯ ಮಾದರಿಯಲ್ಲಿ ಇಲ್ಲಿಯ ಇತರ ಸಂಘ ಸಂಸ್ಥೆಗಳು, ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು' ಎಂದು ಶಾಸಕ ದೊಡ್ಡನಗೌಡ ಪಾಟೀಲ ಮನವಿ ಮಾಡಿದರು.

ನಗರದ ಸೋಸಿಯೂತ್ಸ್ ಅಸೋಸಿಯೇಷನ್, ವಿವೇಕಾನಂದ ಪ್ರಾಥಮಿಕ ಶಾಲೆ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ ನಗರಸಭೆ ಸಹಯೋಗದೊಂದಿಗೆ ಆಯೋಜಿಸಿದ್ದ ‘ಹಸಿರು ಚೈತನ್ಯ-3’ ಸಸಿ ನೆಡುವ ಕಾರ್ಯಕ್ರಮಕ್ಕೆ ಸಸಿ ನೆಟ್ಟು ಚಾಲನೆ ನೀಡಿ ಮಾತನಾಡಿದರು. ‘ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವುದು ಕೇವಲ ಸರ್ಕಾರದ ಕೆಲಸ ಅಲ್ಲ. ಸಾರ್ವಜನಿಕರು ಪ್ರತಿ ಭಾನುವಾರ ಈ ಕಾರ್ಯದಲ್ಲಿ ತೊಡಗಿಸಿಕೊಂಡರೆ ಉತ್ತಮ ಫಲ ದೊರೆಯಲು ಸಾಧ್ಯವಿದೆ. ಹಸಿರೀಕರಣದ ಮುಂದಾಳತ್ವ ವಹಿಸುವ ಸಂಘ ಸಂಸ್ಥೆಗಳಿಗೆ ಎಲ್ಲ ರೀತಿಯ ನೆರವು ನೀಡುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದು, ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಮುಂದೆ ಬರಬೇಕು' ಎಂದು ಕರೆ ನೀಡಿದರು.

ಸೋಸಿಯೂತ್ಸ್ ಅಸೋಸಿಯೇಷನ್ ಅಧ್ಯಕ್ಷ ಆನಂದ ಪಾಟೀಲ ಮಾತನಾಡಿ ‘ಒಂದು ವಾಹನಕ್ಕೆ ಒಂದು ಮರ’ ಘೋಷಣೆಯೊಂದಿಗೆ ಪ್ರತಿ ವಾಹನ ಮಾಲೀಕರು ಕನಿಷ್ಠ ಒಂದು ಮರವನ್ನಾದರೂ ನೆಟ್ಟು ಪೋಷಿಸಬೇಕು ಎಂದು ಜಾಗೃತಿ ಮಾಡುತ್ತೇವೆ. ವಿಶ್ವಸಂಸ್ಥೆಯ ‘ಪ್ಲಾಸ್ಟಿಕ್ ಮುಕ್ತ ಪರಿಸರ’ ನಿರ್ಮಾಣ ಘೋಷಣೆಯನ್ನು 2020ರೊಳಗಾಗಿ ಈಡೇರಿಸುವ ಸಂಕಲ್ಪವನ್ನು ಪ್ರಧಾನಿಯವರು ಮಾಡಿದ್ದು, ಅವರ ಈ ಸಂಕಲ್ಪವನ್ನು ಈಡೇರಿಸಲು ನಾವೆಲ್ಲರೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಪ್ರತಿಜ್ಞೆ ಮಾಡೋಣ ಎಂದರು.

ಮೊದಲ ಹಂತವಾಗಿ 96 ಸಸಿಗಳನ್ನು ನೆಟ್ಟು ಬೇಲಿ ಕಟ್ಟಲಾಗಿದೆ. ಹೆದ್ದಾರಿಯ ಸರ್ವಿಸ್ ರಸ್ತೆ, ಹನಮಸಾಗರ ರಸ್ತೆ, ಬಸವೇಶ್ವರ ವೃತ್ತದಿಂದ ಕಂಠಿ ವೃತ್ತದವರೆಗೆ ಸಸಿಗಳನ್ನು ನೆಡಲಾಗುತ್ತದೆ ಎಂದು ಸೋಸಿಯೂತ್ಸ್ ಪ್ರಕಟಿಸಿತು.

ಡಾ.ಮಹಾಂತೇಶ ಕಡಪಟ್ಟಿ, ಡಾ.ಶ್ರೀಕಾಂತ ಸಾಕಾ, ನಿವೃತ್ತ ಶಿಕ್ಷಕ ಎಸ್.ಜಿ. ರಾಮಗಿರಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT