ಬಾಗೇಪಲ್ಲಿ: ಇಲ್ಲಿನ ಸುಂದರಯ್ಯ ಭವನದ ಸಭಾಂಗಣದಲ್ಲಿ ಶುಕ್ರವಾರ ಸಿಪಿಐಎಂ ತಾಲ್ಲೂಕು ಸಮಿತಿಯಿಂದ ‘ಇರಾನ್ ಮೇಲೆ ಸಾಮ್ರಾಜ್ಯಶಾಹಿ ಅಮೆರಿಕ, ಇಸ್ರೇಲ್ ದಾಳಿ ಖಂಡಿಸಿ, ಯುದ್ಧ ವಿರೋಧಿ’ ಸಭೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಪ್ರಕಾಶ್ ಮಾತನಾಡಿ, ‘ವಿಶ್ವದ ಎಲ್ಲ ದೇಶಗಳು ಯುರೇನಿಯಂ ಹೊಂದಿದ ಅಣ್ವಸ್ತ್ರಗಳನ್ನು ಹೊಂದಿವೆ. ಆದರೆ, ಇರಾನ್ ದೇಶದಲ್ಲಿ ಯುರೇನಿಯಂ ಅಣ್ವಸ್ತ್ರಗಳ ಮೇಲೆ ರಾಜತಾಂತ್ರಿಕತೆ ಮೂಲಕ ಸಮಸ್ಯೆ ಬಗೆಹರಿಸದ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಸಾರುವ ಮೂಲಕ ಅಮಾಯಕ ಜೀವಗಳನ್ನು ಬಲಿ ಪಡೆಯುತ್ತಿರುವುದು ಖಂಡನೀಯ. ಇಸ್ರೇಲ್ ಮತ್ತು ಅಮೆರಿಕ ಭಯೋತ್ಪಾದಕ ನೀತಿ ಅನುಸರಿಸುತ್ತಿವೆ’ ಎಂದರು.

ಭಾರತ, ಪಾಕಿಸ್ತಾನ, ಅಮೆರಿಕ, ಇಸ್ರೇಲ್, ಇರಾನ್ ಸೇರಿದಂತೆ ಎಲ್ಲ ದೇಶಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯುರೇನಿಯಂ ಅಣ್ವಸ್ತ್ರಗಳನ್ನು ಹೊಂದಿವೆ. ಆದರೆ, ಇರಾನ್ ಯುರೇನಿಯಂ ಅಣ್ವಸ್ತ್ರ ದಾಳಿ ಮಾಡಲಿದೆ ಎಂಬ ನೆಪ ಹೇಳಿಕೊಂಡು, ಸಾಮ್ರಾಜ್ಯಶಾಹಿ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ಯುದ್ಧ ಸಾರಿವೆ. ಈ ಮೂಲಕ ಈ ಎರಡೂ ದೇಶಗಳು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಕಾನೂನುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿವೆ ಎಂದರು.

ಯುದ್ಧ ವಿರೋಧಿ ಸಭೆಯಲ್ಲಿ ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ. ಮುನಿವೆಂಕಟಪ್ಪ, ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ಜಯರಾಮರೆಡ್ಡಿ, ಬಿಳ್ಳೂರು ಕೆ. ನಾಗರಾಜ್, ತಾಲ್ಲೂಕು ಸಮಿತಿ ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.