ಪಶ್ಚಿಮ ಬಂಗಾಳದಲ್ಲಿರುವ ಬಾಂಗ್ಲಾದೇಶದ ಶಂಕಿತ ಅಕ್ರಮ ವಲಸಿಗರು ಸಾವಿರಾರು ಸಂಖ್ಯೆಯಲ್ಲಿ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಹಕೀಂಪುರ ಗಡಿ ಪ್ರದೇಶದತ್ತ ಹೋಗುತ್ತಿದ್ದಾರೆ ಎಂದು ಪ್ರತಿಪಾದಿಸುತ್ತಾ ಇನ್ಸ್ಟಾಗ್ರಾಂನಲ್ಲಿ ಒಂದು ವಿಡಿಯೊ ತುಣುಕನ್ನು ಹಂಚಿಕೊಳ್ಳಲಾಗುತ್ತಿದೆ. ಭಾರಿ ಸಂಖ್ಯೆಯಲ್ಲಿ ಜನರು ಸರಂಜಾಮುಗಳೊಂದಿಗೆ ಸಾಗುತ್ತಿರುವುದು ವಿಡಿಯೊದಲ್ಲಿದೆ. ಆದರೆ, ಇದು ಸುಳ್ಳು ಮಾಹಿತಿ.

ವಿಡಿಯೊದ ಕೀಫ್ರೇಮ್ ಒಂದನ್ನು ಗೂಗಲ್ನಲ್ಲಿ ಹಾಕಿ ಹುಡುಕಿದಾಗ, ಹಲವು ‘ಎಕ್ಸ್’ ಪೋಸ್ಟ್ಗಳಲ್ಲಿ ಇದೇ ಮಾದರಿಯ ವಿಡಿಯೊಗಳು ಕಂಡು ಬಂದವು. ಅವುಗಳೆಲ್ಲವೂ ಈ ವರ್ಷದ ಜನವರಿ 2 ಮತ್ತು 5ರ ನಡುವೆ ಹೂಗ್ಲಿ ಜಿಲ್ಲೆಯ ಪುಯಿನಾನ್ ಗ್ರಾಮದಲ್ಲಿ ನಡೆದಿದ್ದ ವಿಶ್ವ ಇಜ್ತೆಮಾ ಕಾರ್ಯಕ್ರಮದಲ್ಲಿ ಸೆರೆ ಹಿಡಿದ ವಿಡಿಯೊಗಳಾಗಿದ್ದವು. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಿದಾಗ, ಶೇಖ್ ಅಲಿ ಎಂಬವರು ಜನವರಿ 5ರಂದು ಪೋಸ್ಟ್ ಮಾಡಿದ, ವಿಡಿಯೊ ಸಿಕ್ಕಿತು. ಆ ವಿಡಿಯೊ ಕೊಂಚ ದೀರ್ಘವಾಗಿತ್ತು. ಹೂಗ್ಲಿ ಜಿಲ್ಲೆಯ ಪುಯಿನಾನ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿತ್ರೀಕರಿಸಿದ ವಿಡಿಯೊ ಎಂದೂ ಅವರು ಹೇಳಿದ್ದರು. ಇದೇ ರೀತಿಯ ಹಲವು ಪೋಸ್ಟ್ಗಳೂ ಕಂಡು ಬಂದವು. ವಿಡಿಯೊ ದೃಶ್ಯಾವಳಿಗಳನ್ನು ಗೂಗಲ್ ಸ್ಟ್ರೀಟ್ ವ್ಯೂ ಇಮೇಜರಿ ಮೂಲಕ ಹೋಲಿಕೆ ಮಾಡಿದಾಗ, ವಿಡಿಯೊ ತುಣುಕು ಮತ್ತು ಚಿತ್ರದಲ್ಲಿ ಕಂಡು ಬಂದ ಪ್ರಮುಖ ಗುರುತುಗಳು (landmarks) ಒಂದೇ ಆಗಿದ್ದವು. ಶೇಖ್ ಅಲಿ ಅವರನ್ನು ನೇರವಾಗಿ ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದಾಗ, ವಿಡಿಯೊವನ್ನು ಜನವರಿ 5ರಂದು ತಾವೇ ಚಿತ್ರೀಕರಿಸಿದ್ದಾಗಿ ದೃಢಪಡಿಸಿದರು. ಜನವರಿಯಲ್ಲಿ ನಡೆದ ಇಸ್ಲಾಂ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ ವಿಡಿಯೊವನ್ನು ಈಗ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.