ಮಗುವೊಂದು ಮಹಡಿಯಿಂದ ರಸ್ತೆಗೆ ಬೀಳುತ್ತಿರುವ ವಿಡಿಯೊ ತುಣುಕನ್ನು ‘ಏಷ್ಯಾ ಡಿಕೋಡೆಡ್’ ಎಂಬ ಎಕ್ಸ್ ಖಾತೆಯಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾಗಿದೆ. ‘ಕೌಟುಂಬಿಕ ಕಲಹದ ಕಾರಣಕ್ಕೆ ಹಿಂದೂ ವ್ಯಕ್ತಿಯೊಬ್ಬ ಮಗುವನ್ನು ಉದ್ದೇಶಪೂರ್ವಕವಾಗಿ ಮೂರನೇ ಮಹಡಿಯಿಂದ ಕೆಳಗೆ ಎಸೆದಿದ್ದಾನೆ’ ಎಂದು ಪೋಸ್ಟ್ನಲ್ಲಿ ಪ್ರತಿಪಾದಿಸಲಾಗಿದೆ. ಆದರೆ ಇದು ಸುಳ್ಳು.

ವಿಡಿಯೊದ ಕೀಫ್ರೇಮ್ ಒಂದನ್ನು ರಿವರ್ಸ್ ಸರ್ಚ್ ವಿಧಾನದಲ್ಲಿ ಗೂಗಲ್ ಲೆನ್ಸ್ ಬಳಸಿ ಹುಡುಕಾಡಿದಾಗ, ಹಲವು ಮಾಧ್ಯಮಗಳಲ್ಲಿ ಈ ಘಟನೆಯ ಬಗ್ಗೆ ವರದಿಯಾಗಿರುವ ಲಿಂಕ್ಗಳು ಸಿಕ್ಕಿದವು. ಇದು ಬೆಂಗಳೂರಿನಲ್ಲಿ ಏಪ್ರಿಲ್ 6ರಂದು ನಡೆದ ಘಟನೆ. ನಾಯಂಡಹಳ್ಳಿ ಪ್ರದೇಶದ ಮನೆಯೊಂದರಲ್ಲಿ ಮೊದಲ ಮಹಡಿಯಿಂದ ಮಗು ಆಕಸ್ಮಿಕವಾಗಿ ಕೆಳಗಡೆ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿತ್ತು. ಆ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ‘ಪ್ರಜಾವಾಣಿ’ ಸೇರಿದಂತೆ ಹಲವು ಮಾಧ್ಯಮಗಳು ಈ ಪ್ರಕರಣದ ವರದಿ ಮಾಡಿವೆ. ಎಲ್ಲ ವರದಿಗಳಲ್ಲೂ ಮಗು ಆಕಸ್ಮಿಕವಾಗಿ ಕೆಳಗಡೆ ಬಿದ್ದಿದೆ ಎಂದೇ ಉಲ್ಲೇಖ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಿ ತಪ್ಪು ಅರ್ಥಕೊಡುವಂತೆ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ಕೂಡ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.