ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈ ದಿಸೆಯಲ್ಲಿ ಬಿಜೆಪಿ ನಾಯಕರು ಹೊರಡಿಸಿದ್ದು ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಜ್ಯದ ಚುನಾವಣೆಯಲ್ಲಿ ಮತದಾನ ಮಾಡಲು ಬಿಜೆಪಿಯು ಹೊರರಾಜ್ಯಗಳಿಂದ ಕಾರ್ಯಕರ್ತರನ್ನು ಕರೆತರುತ್ತಿದೆ. ಹೊರರಾಜ್ಯಗಳಿಂದ ಮತ ಹಾಕಲು ಬಂದವರಿಗೆ ಅಗತ್ಯ ಇರುವ ಸೌಕರ್ಯಗಳನ್ನು ಕಲ್ಪಿಸುವಂತೆ ಪಕ್ಷವು ತನ್ನ ಕಾರ್ಯಕರ್ತರಿಗೆ ಸೂಚಿಸಿದೆ ಎಂದು ಪತ್ರವನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಪತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಹಲವರು ಇಂಥದೇ ಪ್ರತಿಪಾದನೆಯೊಂದಿಗೆ ಪತ್ರ ಹಂಚಿಕೊಂಡಿರುವುದು ಕಂಡಿತು. ಪತ್ರದಲ್ಲಿ ಬಿಜೆಪಿಯ ಮಾಸ್ಟ್ಹೆಡ್, ಲೋಗೊ, ವಿಳಾಸ ಇದ್ದು, ಅದಕ್ಕೆ ರಾಜ್ಯ ಕಚೇರಿ ಉಸ್ತುವಾರಿ ಸಹಿ ಮಾಡಿದ್ದಾರೆ. ಪತ್ರದ ಮೇಲೆ ಏಪ್ರಿಲ್ 20 ಎಂದಿದೆ. ಆದರೆ, ಟಿಎಂಸಿ ಮುಖಂಡ ಕುನಾಲ್ ಘೋಷ್ ಪತ್ರವನ್ನು ಏಪ್ರಿಲ್ 19ರಂದೇ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಪತ್ರದ ಮೇಲೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಚೇರಿ ಉಸ್ತುವಾರಿ ಜಗನ್ನಾಥ ಚಟ್ಟೋಪಾಧ್ಯಾಯ ಅವರ ಸಹಿ ಇದೆ. ಆದರೆ, ಜಗನ್ನಾಥ ಅವರು ಪಕ್ಷದ ರಾಜ್ಯ ಉಪಾಧ್ಯಕ್ಷರಲ್ಲೊಬ್ಬರಾಗಿದ್ದಾರೆ. ವಾಸ್ಇಟ್ಎಐ ಸಾಧನದ ಮೂಲಕ ಪರೀಕ್ಷಿಸಿದಾಗ, ಪತ್ರವು ಎಐನಿಂದ ರೂಪಿಸಿರುವುದು ಎಂದು ಖಚಿತವಾಯಿತು. ಎಐ ನಿರ್ಮಿತ ಪತ್ರವನ್ನು ಹಂಚಿಕೊಳ್ಳುವ ಮೂಲಕ ಸುಳ್ಳು ಪ್ರತಿಪಾದನೆ ಮಾಡಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.