ಕೆಲವು ಮಂದಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿರುವ ಮತ್ತು ಅವರನ್ನು ಪೊಲೀಸರು ತಡೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಭಾರತದಲ್ಲಿ ಪ್ರತಿಭಟನೆಗಳು ಸಾಮಾನ್ಯ ಎನ್ನುವಂತಾಗಿವೆ, ಭಾರತದ ಸೇನೆ ಮತ್ತು ಪೊಲೀಸರ ವಿರುದ್ಧ ಅರುಣಾಚಲ ಪ್ರದೇಶದ ಜನರು ಪ್ರತಿಭಟಿಸುತ್ತಿದ್ದಾರೆ; ತಮಗೆ ಸ್ವಾತಂತ್ರ್ಯ ಬೇಕು ಮತ್ತು ಅರುಣಾಚಲ ಪ್ರದೇಶವನ್ನು ಮತ್ತೆ ಚೀನಾಕ್ಕೆ ಸೇರಿಸಬೇಕು ಎನ್ನುವುದು ಅವರ ಬೇಡಿಕೆಯಾಗಿದೆ’ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊ ಕೀಫ್ರೇಮ್ಗಳನ್ನು ಇನ್ವಿಡ್ ಟೂಲ್ ಮೂಲಕ ಪ್ರತ್ಯೇಕಿಸಿ, ಗೂಗಲ್ ಲೆನ್ಸ್ ಬಳಸಿ ವಿಶ್ಲೇಷಿಸಿದಾಗ, ‘ಅರುಣಾಚಲಹೆಡ್ಲೈನ್ಸ್’ ಎಂಬ ವೆಬ್ಸೈಟ್ನಲ್ಲಿ 2026ರ ಮೇ 15ರಂದು ಇದೇ ವಿಡಿಯೊ ಅಪ್ಲೋಡ್ ಆಗಿರುವುದು ಕಂಡಿತು. ಇತ್ತೀಚೆಗೆ ಜಾರಿಯಾದ ಅರುಣಾಚಲ ಪ್ರದೇಶ ಇನ್ನರ್ ಲೈನ್ ಗೈಡ್ಲೈನ್ಸ್– 2026 ವಿರೋಧಿಸಿ ಜನ ಪ್ರತಿಭಟನೆ ನಡೆಸಿದರು. ಮಾರ್ಗಸೂಚಿಯಲ್ಲಿನ ಕೆಲವು ಅಂಶಗಳು ಸ್ಥಳೀಯರ ಹಕ್ಕುಗಳಿಗೆ ಧಕ್ಕೆ ತರುವಂತಿವೆ ಎನ್ನುವುದು ಪ್ರತಿಭಟನಕಾರರ ಆರೋಪವಾಗಿತ್ತು ಎಂದೂ ವರದಿ ಉಲ್ಲೇಖಿಸಿದೆ. ಈ ಸುದ್ದಿಯು ಇತರ ಹಲವು ಮಾಧ್ಯಮಗಳಲ್ಲಿಯೂ ವರದಿಯಾಗಿದೆ. ಕೆಲವರು ಈ ವಿಡಿಯೊ ಹಂಚಿಕೊಂಡು, ಜನರು ಸೇನೆ ಮತ್ತು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು ಎಂದು ಸುಳ್ಳನ್ನು ಬಿತ್ತಲು ಯತ್ನಿಸುತ್ತಿದ್ದಾರೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.