ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ರಾಜ್ಯದಲ್ಲಿ ಬಾಂಗ್ಲಾದೇಶದವರು ನೆಲಸಿರುವ ಅರಣ್ಯ ಮತ್ತು ಸರ್ಕಾರಿ ಜಾಗವನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ ಎಂದು ‘ಎಕ್ಸ್’ ಬಳಕೆದಾರರೊಬ್ಬರು ಪ್ರತಿಪಾದಿಸುತ್ತಾ ಒಬ್ಬ ಪುರುಷ ಮತ್ತು ಮಹಿಳೆಯರು ಅಳುತ್ತಿರುವ ವಿಡಿಯೊ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು ಮಾಹಿತಿ.

ವಿಡಿಯೊದ ಕೀ ಫ್ರೇಮ್ ಒಂದನ್ನು ರಿವರ್ಸ್ ಸರ್ಚ್ ವಿಧಾನದಲ್ಲಿ ಗೂಗಲ್ನಲ್ಲಿ ಹಾಕಿ ಹುಡುಕಿದಾಗ, ಇದೇ ವಿಡಿಯೊವನ್ನು ಮೇ 20ರಂದು ಸೋಬರ್ ಕಾಂತಾ ಎಂಬ ಸುದ್ದಿ ಸಂಸ್ಥೆಯು ಪ್ರಕಟಿಸಿತ್ತು. ಬಾಂಗ್ಲಾದೇಶದ ಸುದ್ದಿ ಮಾಧ್ಯಮವಾಗಳಾದ ಕಾಲೆರ್ ಕಾಂತೊ ಮತ್ತು ಡೇಲ್ ಸನ್ ಈ ಬಗ್ಗೆ ವರದಿ ಮಾಡಿವೆ. ಬಾಂಗ್ಲಾದೇಶದ ಮಿರ್ಪುರದಲ್ಲಿ ಕೊಳೆಗೇರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದ ವಿಡಿಯೊವಾಗಿದ್ದು, ಕೊಳೆಗೇರಿ ನಿವಾಸಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿರುವ ವಿವರಗಳೂ ವರದಿಯಲ್ಲಿದ್ದವು. ವಿಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅದರಲ್ಲಿ ಕಂಡು ಬಂದ ಅಂಗಡಿಯ ಹೆಸರು ಖಾನ್ ವಸ್ತ್ರ ವಿತಾನ್ ಎಂದು ಇತ್ತು. ಢಾಕಾದ ಮಿರ್ಪುರ ಎಂದೂ ಅದರಲ್ಲಿ ಬರೆದಿತ್ತು. ಗೂಗಲ್ ಮ್ಯಾಪ್ನಲ್ಲಿ ಅಂಗಡಿಯ ಹೆಸರು ಹಾಕಿ ಹುಡುಕಿದಾಗ, ಅದರ ಲೊಕೇಷನ್ ಪತ್ತೆಯಾಯಿತು. ಅದರಲ್ಲಿ ಉಲ್ಲೇಖಿಸಿರುವ ದೂರವಾಣಿ ಸಂಖ್ಯೆಯು ಅಂಗಡಿಯ ಫಲಕದಲ್ಲಿದ್ದ ಸಂಖ್ಯೆಯೇ ಆಗಿತ್ತು. ಬಾಂಗ್ಲಾದೇಶದ ವಿಡಿಯೊವನ್ನು ಪಶ್ಚಿಮ ಬಂಗಾಳದ ವಿಡಿಯೊ ಎಂದು ತಪ್ಪಾಗಿ ಹಂಚಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್ಚೆಕ್ ವರದಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.