ಕಾರಿನಲ್ಲಿ ಕುಳಿತ ಪುರುಷನಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಥಳಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಸ್ಲಿಂ ವ್ಯಕ್ತಿಯು ಮಹಿಳೆಗೆ ಕಿರುಕುಳ ನೀಡಿದ್ದರು. ಅದರಿಂದ ಕೆರಳಿದ ಆ ಮಹಿಳೆಯು ವ್ಯಕ್ತಿ ಕಾರಿನಲ್ಲಿ ಕುಳಿತಿದ್ದಾಗ ಚಪ್ಪಲಿಯಿಂದ ಥಳಿಸಿದರು. ಈ ಘಟನೆ ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎಂದು ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಈ ಸುದ್ದಿ ನಿಜವಲ್ಲ.

ವಿಡಿಯೊದ ಕೀಫ್ರೇಮ್ಗಳನ್ನು ರಿವರ್ಸ್ ಇಮೇಜ್ ಸರ್ಚ್ಗೆ ಒಳಪಡಿಸಿದಾಗ, ಬಾಂಗ್ಲಾದೇಶದ ಹಲವು ಮಾಧ್ಯಮಗಳು ಇದೇ ವಿಡಿಯೊ ಅನ್ನು ಹಂಚಿಕೊಂಡಿರುವುದು ಕಂಡಿತು. ಇದು ಢಾಕಾ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಯಾಗಿದೆ. ಹೊರಗಿನವನೊಬ್ಬ ವಿಶ್ವವಿದ್ಯಾಲಯಕ್ಕೆ ಬಂದು ಯುವತಿಯರನ್ನು ಚುಡಾಯಿಸುತ್ತಿದ್ದ, ವಿದ್ಯಾರ್ಥಿಗಳು ಅವನನ್ನು ಥಳಿಸಿದರು, ಘಟನೆಯು 2026ರ ಏ.26ರಂದು ನಡೆದಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಘಟನೆ ನಡೆದಿರುವುದು ನಿಜ ಎಂದು ಢಾಕಾ ವಿ.ವಿ. ಒಪ್ಪಿಕೊಂಡಿದೆ. ಬಾಂಗ್ಲಾದೇಶದ ವಿಡಿಯೊ ಹಂಚಿಕೊಂಡು, ಅದಕ್ಕೆ ಕೋಮು ಆಯಾಮ ನೀಡಿ, ಸುಳ್ಳು ಪ್ರತಿಪಾದನೆ ಮಾಡಲಾಗುತ್ತಿದೆ ಎಂದು ಫ್ಯಾಕ್ಟ್ಲಿ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.