ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರದ್ದು ಎನ್ನಲಾದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಹಿಂದೂ ಮಹಾಸಾಗರದಲ್ಲಿ ಇರಾನ್ನ ಯುದ್ಧ ನೌಕೆಯು ಇದ್ದ ಸ್ಥಳದ ಬಗ್ಗೆ ಇಸ್ರೇಲ್ಗೆ ಮಾಹಿತಿ ನೀಡುವ ಮೂಲಕ ಭಾರತವು ಇರಾನ್ಗೆ ನಂಬಿಕೆ ದ್ರೋಹ ಎಸಗಿದೆ ಎಂಬುದನ್ನು ಸೇನಾ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ’ ಎಂದು ಬಳಕೆದಾರರು ತಮ್ಮ ಪೋಸ್ಟ್ನಲ್ಲಿ ಪ್ರತಿಪಾದಿಸಿದ್ದಾರೆ. ಆದರೆ, ಇದು ಸುಳ್ಳು ಮಾಹಿತಿ.

ವಿಡಿಯೊವನ್ನು ಗಮನವಿಟ್ಟು ನೋಡಿದಾಗ ಅದರಲ್ಲಿ ಮಾಧ್ಯಮ ಸಂಸ್ಥೆ ಫಸ್ಟ್ಪೋಸ್ಟ್ನ ಲೋಗೋ ಇರುವುದರ ಜೊತೆಗೆ ರೈಸಿನಾ ಡೈಲಾಗ್– 2026 ಎಂದು ಬರೆದಿತ್ತು. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಿದಾಗ ಫಸ್ಟ್ಪೋಸ್ಟ್ನ ಯೂಟ್ಯೂಬ್ ಚಾನೆಲ್ನಲ್ಲಿ ಮಾರ್ಚ್ 7ರಂದು ಅಪ್ಲೋಡ್ ಮಾಡಲಾದ ವಿಡಿಯೊ ಸಿಕ್ಕಿತು. ಅದರಲ್ಲಿ ಸೇನಾ ಮುಖ್ಯಸ್ಥರು ಆಪರೇಷನ್ ಸಿಂಧೂರ, ಪಾಕಿಸ್ತಾನ ಮತ್ತು ಭವಿಷ್ಯದ ಯುದ್ಧಗಳ ಬಗ್ಗೆ ಮಾತನಾಡಿದ್ದರು. 21 ನಿಮಿಷದ ಈ ವಿಡಿಯೊದಲ್ಲಿ ಅವರೆಲ್ಲೂ ಅಮೆರಿಕ–ಇಸ್ರೇಲ್–ಇರಾನ್ ಘರ್ಷಣೆಯ ಬಗ್ಗೆ ಮಾತನಾಡಿರಲಿಲ್ಲ. ಈ ವಿಡಿಯೊದಿಂದ ತುಣುಕೊಂದನ್ನು ತೆಗೆದುಕೊಂಡು ಅದನ್ನು ತಿರುಚಿರುವ ಅನುಮಾನ ಬಂತು. ದೃಢಪಡಿಸುವುದಕ್ಕಾಗಿ ಎಐ ಪತ್ತೆ ಟೂಲ್ ಹೈವ್ ಮಾಡರೇಷನ್ ಮೂಲಕ ವಿಡಿಯೊವನ್ನು ಪರಿಶೀಲನೆಗೆ ಒಳಪಡಿಸಿದಾಗ ಅದರಲ್ಲಿರುವ ಧ್ವನಿ ಎಐ ಮೂಲಕ ಸೃಷ್ಟಿಸಿದ್ದು ಎಂಬುದು ಖಚಿತವಾಯಿತು. ಮಾರ್ಚ್ 9ರಂದು ಪಿಐಬಿ ಕೂಡ ಈಬಗ್ಗೆ ಫ್ಯಾಕ್ಟ್ ಚೆಕ್ ಮಾಡಿ ಇದು ಸುಳ್ಳು ಎಂದು ಹೇಳಿತ್ತು ಎಂದು ಆಲ್ಟ್ನ್ಯೂಸ್ ಫ್ಯಾಕ್ಟ್ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.