ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Fact check: CJI ಪತ್ನಿ ಕುರಿತು ಹರಿದಾಡುತ್ತಿರುವ ಸುದ್ದಿ ನಿಜವೇ?

Published : 16 ಸೆಪ್ಟೆಂಬರ್ 2024, 23:48 IST
Last Updated : 16 ಸೆಪ್ಟೆಂಬರ್ 2024, 23:48 IST
ಫಾಲೋ ಮಾಡಿ
Comments

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್‌ ಅವರ ಪತ್ನಿ ಕಲ್ಪನಾ ದಾಸ್‌ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಲಹಾ ವೈದ್ಯ ಡಾ.ಎಸ್‌.ಪಿ.ದಾಸ್‌ ಅವರ ಸೋದರ ಸೊಸೆ ಎಂದು ಹೇಳುವ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಂದ್ರಚೂಡ್‌ ಅವರು ರಜಾದಿನಗಳನ್ನು ಕಳೆಯಲು ಟಿಎಂಸಿ ಮುಖಂಡ ಅಭಿಷೇಕ್‌ ಬ್ಯಾನರ್ಜಿ ಅವರೊಂದಿಗೆ ವಿದೇಶಕ್ಕೆ ತೆರಳಿದ್ದಾರೆ ಎಂದೂ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಕೋಲ್ಕತ್ತದ ಆಸ್ಪತ್ರೆಯಲ್ಲಿ ನಡೆದಿರುವ ವೈದ್ಯೆಯ ಕೊಲೆ ಪ್ರಕರಣದ ವಿಚಾರಣೆಯನ್ನು ಸಿಜೆಐ ನೇತೃತ್ವದ ನ್ಯಾಯಪೀಠವು ನಡೆಸುತ್ತಿರುವಾಗಲೇ ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ಅಂತರ್ಜಾಲದಲ್ಲಿ ಕೀವರ್ಡ್‌ ಹಾಕಿ ಹುಡುಕಾಡಿದಾಗ ಕಲ್ಪನಾ ದಾಸ್‌ ಅವರು ಡಾ.ಎಸ್‌.ಪಿ.ದಾಸ್‌ ಅವರ ಸಂಬಂಧಿ ಎನ್ನುವುದಕ್ಕೆ ಹಾಗೂ ಸಿಜೆಐ ಅವರು ವಿದೇಶದಲ್ಲಿ ಟಿಎಂಸಿ ಮುಖಂಡ ಅಭಿಷೇಕ್‌ ಬ್ಯಾನರ್ಜಿ ಅವರೊಂದಿಗೆ ಸಮಯ ಕಳೆದಿದ್ದಾರೆ ಎನ್ನುವುದರ ಬಗ್ಗೆ ಯಾವುದೇ ಪುರಾವೆ ಸಿಗಲಿಲ್ಲ. ಸಿಜೆಐ ಚಂದ್ರಚೂಡ್ ಅವರು ತಾವು ಒಡಿಶಾದ ‘ಹೆಮ್ಮೆಯ ಅಳಿಯ’ ಎಂದು ಒಮ್ಮೆ ಹೇಳಿದ್ದರು. ದಿ ಸ್ಟೇಟ್ಸ್‌ಮನ್‌ ವರದಿ ಪ್ರಕಾರ, ಅವರ ಮೊದಲ ಪತ್ನಿ ರಶ್ಮಿ ಅವರು ಕ್ಯಾನ್ಸರ್‌ನಿಂದ ಮೃತಪಟ್ಟ ನಂತರ ಚಂದ್ರಚೂಡ್‌ ಅವರು ಕಲ್ಪನಾ ದಾಸ್‌ ಅವರನ್ನು ಮದುವೆಯಾಗಿದ್ದರು. ಈ ಬಗ್ಗೆ ‘ಬೂಮ್‌ಲೈವ್‌’ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯನ್ನು ಸಂಪರ್ಕಿಸಿದಾಗ, ‘ಈ ಪೋಸ್ಟ್‌ನಲ್ಲಿರುವ ಅಂಶಗಳು ಸುಳ್ಳು’ ಎಂದು ಹೇಳಿದ್ದು, ‘ನ್ಯಾಯಾಂಗ ವ್ಯವಸ್ಥೆಗೆ ಹಾನಿ ಮಾಡುವ ಯತ್ನ’ ಎಂದೂ ಹೇಳಿದೆ. ಬೂಮ್‌ಲೈವ್‌ ಈ ಬಗ್ಗೆ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT