ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ಮಾತನಾಡುತ್ತಿರುವ ವಿಡಿಯೊ ತುಣುಕೊಂದನ್ನು ರಾಜಕೀಯ ಮುಖಂಡರು ಸೇರಿದಂತೆ ಹಲವರು ಹಂಚಿಕೊಳ್ಳುತ್ತಿದ್ದಾರೆ. ಸ್ವರ್ಣ ಕಾಂತಾ ಅವರು ಆರ್ಎಸ್ಎಸ್ ಕಾರ್ಯಕ್ರಮಗಳಲ್ಲಿ ಭಾಗಿಯಾದ ನಂತರ ಅವರಿಗೆ ಬಡ್ತಿಗಳು ಸಿಕ್ಕಿವೆ ಎಂದು ಪ್ರತಿಪಾದಿಸುತ್ತಾ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗುತ್ತಿದೆ. ದೆಹಲಿಯ ಅಬಕಾರಿ ನೀತಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲು ಸ್ವರ್ಣ ಕಾಂತಾ ಅವರು ಇತ್ತೀಚೆಗೆ ನಿರಾಕರಿಸಿದ ನಂತರ, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಪೋಸ್ಟ್ನಲ್ಲಿ ಮಾಡುತ್ತಿರುವ ಪ್ರತಿಪಾದನೆ ಸುಳ್ಳು.

ವಿಡಿಯೊದಲ್ಲಿರುವ ಭಾಷಣವನ್ನು ಕೂಲಂಕಷವಾಗಿ ಆಲಿಸಿದಾಗ, ಅವರು ಎಲ್ಲಿಯೂ ಆರ್ಎಸ್ಎಸ್ ಅಥವಾ ಬೇರೆ ಯಾವುದೇ ರಾಜಕೀಯ ಕಾರ್ಯಕ್ರಮಗಳ ಬಗ್ಗೆ ಉಲ್ಲೇಖಿಸಿರುವುದು ಕಂಡು ಬರಲಿಲ್ಲ. ‘ಕಳೆದ ಕೆಲವು ವರ್ಷಗಳಿಂದ ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗಲೆಲ್ಲ ನಾನು ಬೇರೆ ಬೇರೆ ಹುದ್ದೆಯಲ್ಲಿದ್ದೆ. ಮೊದಲು ಜಿಲ್ಲಾ ಕೌಟುಂಬಿಕ ನ್ಯಾಯಾಧೀಶೆ ಆಗಿದ್ದೆ, ಮರು ವರ್ಷ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಆಗಿದ್ದೆ. ಈಗ ಇದೇ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಭಾಗವಹಿಸುತ್ತಿದ್ದೇನೆ. ಆ ‘ಬಾಬಾ’ನ ಕೃಪೆಯಿಂದ ಇದು ನಡೆದಿದೆ’ ಎಂದು ಭಾಷಣದಲ್ಲಿ ಹೇಳುವುದು ಕೇಳಿಸುತ್ತದೆ. ವಿಡಿಯೊದ ಕೀಫ್ರೇಮ್ ಒಂದನ್ನು ರಿವರ್ಸ್ ಸರ್ಚ್ ವಿಧಾನದ ಮೂಲಕ ಗೂಗಲ್ ಲೆನ್ಸ್ ಬಳಸಿ ಹುಡುಕಿದಾಗ ಉತ್ತರ ಪ್ರದೇಶದ ವಾರಾಣಸಿಯ ಮಹಾತ್ಮಗಾಂಧಿ ಕಾಶಿ ವಿದ್ಯಾಪೀಠದ ಕಾನೂನು ವಿಭಾಗದ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಲಾದ ವಿಡಿಯೊ ಸಿಕ್ಕಿತು. 2024ರ ಮೇ19ರಂದು ಸಂಸ್ಥೆಯ ಕಾನೂನು ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಲ್ಲಿ ಅವರು ಕಾಶಿ ವಿಶ್ವನಾಥನನ್ನು ‘ಬಾಬಾ’ ಎಂದು ಉಲ್ಲೇಖಿಸಿ ಮಾತನಾಡಿದ್ದರು. ಭಾಷಣದ ಪೂರ್ಣ ವಿಡಿಯೊ ಕಾನೂನು ವಿಭಾಗದ ಫೇಸ್ಬುಕ್ ಪುಟದಲ್ಲಿ ಲಭ್ಯವಿದೆ. ಹಳೆಯ ವಿಡಿಯೊವನ್ನು ಈಗ ತಪ್ಪಾಗಿ ಬಿಂಬಿಸಿ ಹಂಚಿಕೊಳ್ಳಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.