ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರದ ಕುಕಿ ಸಂಘಟನೆ ಅಫೀಮು ಮಾರಾಟ ಮೇಳ ಆಯೋಜಿಸಿರುವುದು; ಸುಳ್ಳು ಸುದ್ದಿ

Published 2 ಅಕ್ಟೋಬರ್ 2023, 22:24 IST
Last Updated 2 ಅಕ್ಟೋಬರ್ 2023, 22:24 IST
ಅಕ್ಷರ ಗಾತ್ರ

‘ಮಣಿಪುರದ ಕುಕಿ ಬುಡಕಟ್ಟು ಸಮುದಾಯದ ಜನರ ಸಂಘಟನೆಯಾದ ಐಟಿಎಲ್‌ಎಫ್‌ ಈಚೆಗೆ ಒಂದು ಪ್ರಕಟಣೆ ಹೊರಡಿಸಿದೆ. ಅದರಲ್ಲಿ, ‘ನಾವು ಸೆಪ್ಟೆಂಬರ್ 30ರಿಂದ ಅಕ್ಟೋಬರ್ 2ರವರೆಗೆ ಅಫೀಮು ಹೂವಿನ ಮಾರಾಟ ಮೇಳವನ್ನು ಆಯೋಜಿಸುತ್ತಿದ್ದೇವೆ. ಎಲ್ಲಾ ಕುಕಿ ಜನರೂ ಬಂದು ಮೇಳದಲ್ಲಿ ಭಾಗವಹಿಸಬೇಕು. ಹೂವು, ಹೂಗುಚ್ಛ, ಹೂದಾನಿಗಳನ್ನು ಖರೀದಿಸುವ ಮೂಲಕ ನಮ್ಮ ಆರ್ಥಿಕತೆಯನ್ನು ಉತ್ತೇಜಿಸಬೇಕು. ಈ ಸಂಕಷ್ಟ ಕಾಲದಲ್ಲಿ ನಮ್ಮ ಹೋರಾಟಕ್ಕೆ ನೆರವಾಗಬೇಕು’ ಎಂದು ಆ ಪ್ರಕಟಣೆಯಲ್ಲಿ ಕರೆ ನೀಡಲಾಗಿದೆ. ಕುಕಿ ಜನರು ಬಹಿರಂಗವಾಗಿಯೇ ಅಫೀಮು ಮಾರಾಟ ಮಾಡುತ್ತಿದ್ದಾರೆ’ ಎಂಬ ವಿವರಣೆ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇದು ಸುಳ್ಳು ಸುದ್ದಿ.

‘ಇಂತಹ ಪ್ರಕಟಣೆ ಬಗ್ಗೆ ಐಟಿಎಲ್‌ಎಫ್‌ ಪದಾಧಿಕಾರಿಗಳನ್ನು ವಿಚಾರಿಸಲಾಯಿತು. ತಾವು ಅಂತಹ ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂಬುದನ್ನು ಐಟಿಎಲ್‌ಎಫ್‌ ದೃಢಪಡಿಸಿತು. ಜತೆಗೆ ಐಟಿಎಲ್‌ಎಫ್‌ನ ಜಾಲತಾಣವನ್ನು ಪರಿಶೀಲಿಸಲಾಯಿತು. ಅಲ್ಲಿ ಅಂತಹ ಯಾವುದೇ ಪ್ರಕಟಣೆ ಇರಲಿಲ್ಲ. ಐಟಿಎಲ್‌ಎಫ್‌ನ ಜಾಲತಾಣದಲ್ಲಿ ಇದ್ದ ಇತ್ತೀಚಿನ ಪ್ರಕಟಣೆ ಅಂದರೆ ಸೆಪ್ಟೆಂಬರ್ 25ರದ್ದು. ಆದರೆ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪ್ರಕಟಣೆಯಲ್ಲಿ ಇರುವ ದಿನಾಂಕ ಸೆಪ್ಟೆಂಬರ್ 26. ಐಟಿಎಲ್‌ಎಫ್‌ನ ಎಲ್ಲಾ ಅಧಿಕೃತ ಪ್ರಕಟಣೆಗಳಲ್ಲಿ ಅದರ ಲೋಗೊವಿನ ವಾಟರ್‌ಮಾರ್ಕ್‌ ಇದೆ. ಆದರೆ, ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪ್ರಕಟಣೆಯ ಪತ್ರದಲ್ಲಿ ಅಂತಹ ವಾಟರ್‌ಮಾರ್ಕ್‌ ಇಲ್ಲ. ಹೀಗಾಗಿ ಇದು ನಕಲಿ ಪ್ರಕಟಣೆ’ ಎಂದು ದಿ ಕ್ವಿಂಟ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT