ಹೂವು ಮಾರಾಟ ಮಾಡುತ್ತಿರುವ ಮುಸ್ಲಿಂ ಬಾಲಕನೊಬ್ಬ ಹೂವು ಗುಚ್ಛದ ಮೇಲೆ ಉಗುಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತದ ದೇವಾಲಯವೊಂದರ ಹೊರಗಡೆ ಪೂಜೆಗಾಗಿ ಹೂವುಗಳನ್ನು ಮಾರುತ್ತಿರುವ ಮುಸ್ಲಿಂ ಬಾಲಕ ಬಾಯಲ್ಲಿ ನೀರು ತುಂಬಿ ನಂತರ ಹೂವಿನ ಮೇಲೆ ಉಗುಳುತ್ತಿದ್ದಾನೆ ಎಂಬರ್ಥದಲ್ಲಿ ಈ ವಿಡಿಯೊವನ್ನು ವಿಶ್ಲೇಷಿಸಿ ‘ಎಕ್ಸ್’, ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಇದಕ್ಕೆ ಫ್ಲವರ್ ಜಿಹಾದ್ ಎಂಬಂತಹ ಒಕ್ಕಣೆಗಳನ್ನೂ ನೀಡಲಾಗುತ್ತಿದೆ. ಆದರೆ, ಇದು ಸುಳ್ಳು.
ಇದು ಭಾರತದಲ್ಲಿ ನಡೆದಿರುವ ಘಟನೆಯ ವಿಡಿಯೊ ಅಲ್ಲ, ಪಾಕಿಸ್ತಾನದಲ್ಲಿ ನಡೆದಿರುವುದು. ವಿಡಿಯೊದ ಕೀ–ಫ್ರೇಮ್‌ಗಳನ್ನು ವಿಭಜಿಸಿ ರಿವರ್ಸ್ ಇಮೇಜ್ ಶೋಧ ಮಾಡಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಪಾಕಿಸ್ತಾನದ್ದು ಎಂಬುದು ತಿಳಿದು ಬಂತು. ಸೆ.1ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಕೂಡ ಮಾಡಲಾಗಿದೆ. ಜೊತೆಗೆ ವಿಡಿಯೊದಲ್ಲಿ ಕಾಣಿಸುವ ಕಾರಿನ ನಂಬರ್ ಪ್ಲೇಟ್‌ನಲ್ಲಿ ನೋಂದಣಿ ಸಂಖ್ಯೆ ಕೂಡ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ್ದು ಎಂದು ಬೂಮ್‌ಲೈವ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.