ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check | ಐಎಸ್‌ ಉಗ್ರ ಸಂಘಟನೆಯ ಟೆಂಟ್‌ನಿಂದ 38 ಹಿಂದೂ ಹುಡುಗಿಯರ ರಕ್ಷಣೆ ?

Published 23 ಮೇ 2023, 0:10 IST
Last Updated 23 ಮೇ 2023, 0:10 IST
ಅಕ್ಷರ ಗಾತ್ರ

‘ನಿಜವಾದ ಕೇರಳ ಸ್ಟೋರಿ. ಹೆಣ್ಣು ಮಕ್ಕಳನ್ನು ಐಎಸ್‌ಐಎಸ್‌ ಭಯೋತ್ಪಾದಕರು ತಮ್ಮ ಟೆಂಟಿನಲ್ಲಿ ಕಾಲಿಗೆ ಸರಪಳಿ ಬಿಗಿದು ಕಟ್ಟಿದ್ದಾರೆ. ಈ ಹೆಣ್ಣು ಮಕ್ಕಳು ಜೀವಂತ ಹೆಣವಾಗಿದ್ದಾರೆ. ಪೋಷಕರೇ ಹೆಣ್ಣು ಮಕ್ಕಳನ್ನು ಜೋಪಾನವಾಗಿ ಕಾಪಾಡಿ. ಇಂತಹ ಸತ್ಯವನ್ನು ನಮ್ಮ ಹಿಂದೂಗಳೇ ಅರ್ಥ ಮಾಡುಕೊಳ್ಳುತ್ತಿಲ್ಲ ಏಕೆ? ಏನಾಗಿದೆ ನಮ್ಮ ಹಿಂದೂಗಳಿಗೆ? ಇದೇನು ಹೊಸದಲ್ಲ. ಇದೇನು ಮೊದಲಲ್ಲ ಇದೇನು ಮುಗಿಯುವುದಿಲ್ಲ. ನಮ್ಮ ಹಿಂದೂ ಹೆಣ್ಮಕ್ಕಳ ರೋದನೆ ಕೇಳುವವರೇ ಇಲ್ಲ’ ಎಂಬ ವಿವರ ಇರುವ ಸಂದೇಶ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಈ ಸಂದೇಶದ ಜತೆಗೆ ಒಂದು ವಿಡಿಯೊವನ್ನೂ ಹಂಚಿಕೊಳ್ಳಲಾಗಿದೆ. ಬಾಂಗ್ಲಾದೇಶದಲ್ಲಿದ್ದ ಐಎಸ್‌ ಉಗ್ರ ಸಂಘಟನೆಯ ಟೆಂಟ್‌ನಿಂದ ಭಾರತದ 38 ಹಿಂದೂ ಹುಡುಗಿಯರನ್ನು ಸೇನೆಯು ರಕ್ಷಿಸಿದೆ ಎಂಬ ಮಾಹಿತಿಯನ್ನು ವಿಡಿಯೊ ಜತೆಗೆ ಹಂಚಿಕೊಳ್ಳಲಾಗಿದೆ.  ಆದರೆ, ಇದು ಸುಳ್ಳು ಸುದ್ದಿ.

ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೊವನ್ನು ‘ವೈಪಿಜೆ ನೆವಾಂಡಾ’ ಎಂಬ ಯುಟ್ಯೂಬ್‌ ಚಾನೆಲ್‌ ಮತ್ತು ನೆವಾಂಡಾ ಮೀಡಿಯಾ ಸೆಂಟರ್‌ ಎಂಬ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊಗೂ ಭಾರತೀಯರಿಗೂ ಯಾವುದೇ ಸಂಬಂಧವಿಲ್ಲ. ವೈಪಿಜೆ ನೆವಾಂಡಾ ಎಂಬುದು ಸಿರಿಯಾದ ಖುರ್ದ್‌ ಜನಾಂಗದ ಮಹಿಳಾ ಸೇನೆಯ ಹೆಸರು. ಐಎಸ್‌ ಉಗ್ರರ ವಿರುದ್ಧ ಹೋರಾಡಲು ಖುರ್ದ್‌ ಮಹಿಳೆಯರೇ ಕಟ್ಟಿದ ಸೇನೆ ಇದು. 2020ರ ಕೋವಿಡ್‌ ಸಂದರ್ಭದಲ್ಲಿ ಟರ್ಕಿ ಗಡಿಯಲ್ಲಿದ್ದ ಐಎಸ್‌ ಉಗ್ರರ ಶಿಬಿರದ ಮೇಲೆ ವೈಪಿಜೆ ಮಹಿಳಾ ಸೇನೆಯ ತುಕಡಿಯು ದಾಳಿ ನಡೆಸಿತ್ತು. ಆ ಶಿಬಿರದಲ್ಲಿ ಬಂಧನದಲ್ಲಿದ್ದ ಬಾಲಕಿಯರನ್ನು ಮಹಿಳಾ ಸೈನಿಕರು ರಕ್ಷಿಸಿದ್ದರು. ಅದರ ವಿಡಿಯೊ ಇದು. ಭಾರತಕ್ಕೂ, ಭಾರತದ ಹಿಂದೂ ಯುವತಿಯರಿಗೂ ಸಂಬಂಧವೇ ಇಲ್ಲದ ವಿಡಿಯೊವನ್ನು ಭಾರತದ್ದೆಂದು ತಿರುಚಿ ಹಂಚಿಕೊಳ್ಳಾಗಿದೆ. ಜತೆಗೆ ಸಿರಿಯಾ–ಟರ್ಕಿಯಲ್ಲಿ ನಡೆದ ಕಾರ್ಯಾಚರಣೆಯ ವಿಡಿಯೊವನ್ನು ಬಾಂಗ್ಲಾದೇಶದಲ್ಲಿ ನಡೆದ ಕಾರ್ಯಾಚರಣೆ ಎಂದು ತಪ್ಪು ಮಾಹಿತಿ ಹಂಚಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT