‘ಬಂಗಾಳದಲ್ಲಿ ಗಾಯಗೊಂಡ ಸೇನಾ ಯೋಧನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ವಾಹನ ತಡೆದು ನಿಲ್ಲಿಸಿದ ಸ್ಥಿತಿ ಇದು. ನಿಮ್ಮ ಮಕ್ಕಳ ಭವಿಷ್ಯ ನೋಡಿ, ಮುಸ್ಲಿಮರ ಸಂಖ್ಯೆ ಶೇ 30ರಷ್ಟು ಇರುವಾಗಿನ ಸ್ಥಿತಿ ಇದು ಮತ್ತು ಅಲ್ಲಿ ಅವರನ್ನು ಬೆಂಬಲಿಸುವ ಸೆಕ್ಯುಲರ್ ಸರ್ಕಾರವಿದೆ. ಪರಿಸ್ಥಿತಿ ತೀರಾ ಹದಗೆಡುವವರೆಗೆ ಹಿಂದೂಗಳು ಕಣ್ಣುಮುಚ್ಚೇ ಇರುತ್ತಾರೆ ಮತ್ತು ಯೋಗಿ, ಮೋದಿಯವರನ್ನು ಶಪಿಸುತ್ತಲೇ ಇರುತ್ತಾರೆ. ಮುಸ್ಲಿಮರ ಧೈರ್ಯ ನೋಡಿ, ಅವರು ಸೇನೆಯನ್ನೇ ಎದುರಿಸುತ್ತಿದ್ದಾರೆ. ಹಿಂದೂಗಳಿಗೆ ಏನಾಗಿದೆ? ಎದ್ದೇಳಿ ಇನ್ನೂ ಸಮಯವಿದೆ ಇವರನ್ನು ವಿರೋಧಿಸುವುದೋ ಶರಣಾಗುವುದೋ ನಿಮಗೆ ಬಿಟ್ಟಿದ್ದು’ ಎಂಬ ವಿವರ ಇರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಜತೆ ಕೆಲವು ಮುಸ್ಲಿಮರು ಸೇನಾ ವಾಹನವೊಂದನ್ನು ತಡೆದು ನಿಲ್ಲಿಸುವ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಆದರೆ, ಇದು ಸುಳ್ಳು ಸುದ್ದಿ.
‘ಇದು ಸುಳ್ಳು ಸುದ್ದಿ. ಪ್ರಧಾನಿ ನರೇಂದ್ರ ಮೋದಿ ಅವರು 2021ರ ಮಾರ್ಚ್‌ನಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು. ಅವರ ಭೇಟಿಯನ್ನು ವಿರೋಧಿಸಿ ಅಲ್ಲಿನ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು ಮತ್ತು ಬಾಂಗ್ಲಾ ಸೇನೆಯ ವಾಹನಗಳನ್ನು ತಡೆದಿದ್ದರು. ಆ ವಿಡಿಯೊವನ್ನು ಪಶ್ಚಿಮ ಬಂಗಾಳದ್ದು ಎಂದು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.