ತೃಣಮೂಲ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಅವರು ಒಂದು ವಿಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು, ಇಬ್ಬರು ಹೆಣ್ಣುಮಕ್ಕಳು ಒಂದು ಫ್ಲೆಕ್ಸ್ ಅನ್ನು ತೋರಿಸುವ ದೃಶ್ಯ ಅದರಲ್ಲಿದೆ. ಫ್ಲೆಕ್ಸ್ನಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ನಿಂತುಕೊಂಡು ಬಿಜೆಪಿಯ ಹಿರಿಯ ನಾಗರಿಕರಿಗೆ ಭಾರತ ರತ್ನ ಪ್ರದಾನ ಮಾಡುತ್ತಿರುವುದು, ಪಕ್ಕದಲ್ಲಿ ಪ್ರಧಾನಿ ಮೋದಿ ಅವರು ಕುರ್ಚಿಯಲ್ಲಿ ಕುಳಿತುಕೊಂಡು ಚಪ್ಪಾಳೆ ತಟ್ಟುತ್ತಿರುವ ಫೋಟೊ ಇದೆ. ಇಲ್ಲಿ ಪ್ರಧಾನಿಯವರು ರಾಷ್ಟ್ರಪತಿ ಅವರಿಗೆ ಅಗೌರವ ಸೂಚಿಸಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ತೃಣಮೂಲ ಕಾಂಗ್ರೆಸ್ನ ಅಧಿಕೃತ ಎಕ್ಸ್ ಖಾತೆಯಲ್ಲೂ ಫ್ಲೆಕ್ಸ್ನಲ್ಲಿರುವ ಚಿತ್ರದ ಮೂಲ ವಿಡಿಯೊ ಹಾಕಲಾಗಿದೆ. ಆದರೆ, ಇದು ವಾಸ್ತವ ಅಲ್ಲ.

ವಿಡಿಯೊದ ಸ್ಕ್ರೀನ್ಶಾಟ್ ತೆಗೆದು ಫ್ಲೆಕ್ಸ್ನಲ್ಲಿರುವ ಚಿತ್ರದ ಭಾಗವನ್ನು ಕ್ರಾಪ್ ಮಾಡಿ ಗೂಗಲ್ ಲೆನ್ಸ್ನಲ್ಲಿ ಹಾಕಿ ಹುಡುಕಿದಾಗ ರಾಷ್ಟ್ರಪತಿ ಭವನದ ಅಧಿಕೃತ ಎಕ್ಸ್ ಖಾತೆಯಲ್ಲಿರುವ ಫೋಟೊ ಸಿಕ್ಕಿತು. 2024ರ ಮಾರ್ಚ್ 31ರಂದು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಭಾರತ ರತ್ನ ಪುರಸ್ಕಾರವನ್ನು ಪ್ರದಾನ ಮಾಡಿದ ಸಂದರ್ಭದ ಚಿತ್ರ ಅದು. ಅಡ್ವಾಣಿ ಅವರ ಅನಾರೋಗ್ಯದ ಕಾರಣಕ್ಕೆ ಅವರ ಮನೆಯಲ್ಲೇ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಅದರಲ್ಲಿ ಪ್ರಧಾನಿ ಮೋದಿ ಅವರೂ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದ್ರೌಪದಿ ಮುರ್ಮು ಅವರಿಗೂ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಭಾರತ ರತ್ನ ಪ್ರದಾನ ಮಾಡುವಾಗ ಮುರ್ಮು ಅವರು ಅಡ್ವಾಣಿ ಅವರ ಬಳಿಗೆ ತೆರಳಿ ನಿಂತುಕೊಂಡು ಪ್ರದಾನ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲೂ ಈ ಸಮಾರಂಭದ ವಿಡಿಯೊ ಇತ್ತು. ಪ್ರಧಾನಿ ಅವರಲ್ಲದೆ, ಅಲ್ಲಿ ನೆರೆದಿದ್ದ ಎಲ್ಲರೂ ತಮ್ಮ ಆಸನದಲ್ಲಿ ಕುಳಿತೇ ಇದ್ದರು. ರಾಷ್ಟ್ರಪತಿ ಅವರು ಪದ್ಮ ಪ್ರಶಸ್ತಿ, ಭಾರತ ರತ್ನ ಪುರಸ್ಕಾರವನ್ನು ಪ್ರದಾನ ಮಾಡುವಾಗ ಅನುಸರಿಸಲಾಗುವ ಶಿಷ್ಟಾಚಾರದ ಬಗ್ಗೆ ಹುಡುಕಿದಾಗ, ರಾಷ್ಟ್ರಪತಿ ಮತ್ತು ಪುರಸ್ಕತರು ಮಾತ್ರ ಎದ್ದು ನಿಲ್ಲುವುದು (ಇಲ್ಲಿ ಅನಾರೋಗ್ಯದ ಕಾರಣಕ್ಕೆ ಅಡ್ವಾಣಿ ಕುಳಿತಿದ್ದರು), ಉಳಿದವರು ತಮ್ಮ ಆಸನಗಳಲ್ಲಿ ಕುಳಿತಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ತಿಳಿಯಿತು ಎಂದು ಪಿಟಿಐ ಫ್ಯಾಕ್ಟ್ಚೆಕ್ ವರದಿ ತಿಳಿಸಿದೆ. ಆಲ್ಟ್ನ್ಯೂಸ್ ಕೂಡ ಈ ಬಗ್ಗೆ ಫ್ಯಾಕ್ಟ್ಚೆಕ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.