ಇರಾನ್ ವಿರುದ್ಧದ ದಾಳಿಗೆ ಅಮೆರಿಕವು ಭಾರತದ ನೌಕಾ ನೆಲೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ ಈ ಸುದ್ದಿಯನ್ನು ಕೇಂದ್ರ ಸರ್ಕಾರದ 'ಪಿಐಬಿ ಫ್ಯಾಕ್ಟ್ ಚೆಕ್' ಘಟಕವು 'ಸುಳ್ಳು' ಹಾಗೂ 'ಆಧಾರರಹಿತ' ಎಂದು ಸ್ಪಷ್ಟನೆ ನಡೆದಿದೆ.

ಏನಿದು ಘಟನೆ?

ಅಮೆರಿಕ ಮೂಲದ 'ಒನ್ ಅಮೆರಿಕ ನ್ಯೂಸ್ ನೆಟ್ವರ್ಕ್' (ಒಎಎನ್ಎನ್) ಚಾನೆಲ್ನಲ್ಲಿ ಮಾತನಾಡಿದ್ದ ಅಮೆರಿಕ ಸೇನೆಯ ಮಾಜಿ ಕರ್ನಲ್ ಡೌಗ್ಲಾಸ್ ಮ್ಯಾಕ್ಗ್ರೆಗರ್, ಇರಾನ್ ವಿರುದ್ಧದ ದಾಳಿಗಾಗಿ ಅಮೆರಿಕವು ಭಾರತದ ನೌಕಾ ನೆಲೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಗೊಂದಲಕ್ಕೆ ಕಾರಣವಾಗಿತ್ತು.

ನಿಜಾಂಶ ಬಯಲು ಮಾಡಿದ ಪಿಐಬಿ ಫ್ಯಾಕ್ಟ್ ಚೆಕ್:

ಈ ಕುರಿತು ಸ್ಪಷ್ಟನೆ ನೀಡಿರುವ ಪಿಐಬಿ ಫ್ಯಾಕ್ಟ್ ಚೆಕ್, ಇರಾನ್ ಮೇಲೆ ದಾಳಿ ನಡೆಸಲು ಭಾರತದ ನೌಕಾ ನೆಲೆಗಳನ್ನು ಬಳಸಿಕೊಳ್ಳುತ್ತಿದೆ ಎಂಬುದು ಸಂಪೂರ್ಣ ಸುಳ್ಳು ಹಾಗೂ ಆಧಾರರಹಿತ ಎಂದಿದೆ.

ಎಚ್ಚರಿಕೆ...

ಯಾವುದೇ ಅಧಿಕೃತ ಮೂಲಗಳಿಂದ ದೃಢಪಡಿಸಿಕೊಳ್ಳದೇ ಇಂತಹ ಸೂಕ್ಷ್ಮ ವಿಷಯಗಳ ಮಾಹಿತಿಯನ್ನು ಹಂಚಿಕೊಳ್ಳದಂತೆ ಸಲಹೆ ನೀಡಿದೆ.

ಹಾಗೆಯೇ ಭಾರತ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಅನುಮಾನಸ್ಪದ ಸುದ್ದಿಗಳನ್ನು ಪಿಐಬಿ ಫ್ಯಾಕ್ಟ್ ಚೆಕ್ ತಂಡಕ್ಕೆ ಕಳುಹಿಸಿಕೊಡುವಂತೆ ವಿನಂತಿಸಿದೆ.
.Fact Check: ಇರಾನ್ ದಾಳಿಯ ನೆನೆದು US ಯೋಧ ಅಳುತ್ತಿದ್ದಾನೆ ಎಂಬ ವಿಡಿಯೊ ಸುಳ್ಳು.Fact Check: ದುಬೈನ ಬುರ್ಜ್ ಖಲೀಫಾ ಬಳಿ ಯುದ್ಧವಿಮಾನಗಳ ಹಾರಾಟದ ವಿಡಿಯೊ ನಿಜವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.