ಮತಗಟ್ಟೆಯೊಂದರ ಬಳಿ ಕುಳಿತುಕೊಂಡಿರುವ ಟಿಎಂಸಿ ಕಾರ್ಯಕರ್ತರಿಗೆ ಪೊಲೀಸರು ಹೊಡೆಯುತ್ತಿರುವ ವಿಡಿಯೊ ತುಣುಕನ್ನು ‘ಎಕ್ಸ್’ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಇದೇ 23ರಂದು ಪಶ್ಚಿಮ ಬಂಗಾಳದ ವಿಧಾನಸಭೆಗೆ ನಡೆದ ಮೊದಲ ಹಂತದ ಮತದಾನದ ದಿನ ಟಿಎಂಸಿ ಕಾರ್ಯಕರ್ತರು ಮತಗಟ್ಟೆಯ ಬಳಿ ಇದ್ದ ರಸ್ತೆಯಲ್ಲಿ ಪ್ರಚಾರ ನಡೆಸುತ್ತಿದ್ದರು. ಈ ಕಾರಣಕ್ಕೆ ಪೊಲೀಸರು ಅವರಿಗೆ ಹೊಡೆದಿದ್ದಾರೆ ಎಂದು ಪೋಸ್ಟ್ನಲ್ಲಿ ಪ್ರತಿಪಾದಿಸಲಾಗಿದೆ. ಆದರೆ, ಇದು ಸುಳ್ಳು.

ವಿಡಿಯೊ ತುಣುಕಿನ ಕೀಫ್ರೇಮ್ ಒಂದನ್ನು ರಿವರ್ಸ್ ಇಮೇಜ್ ವಿಧಾನದಲ್ಲಿ ಗೂಗಲ್ ಲೆನ್ಸ್ ಬಳಸಿ ಹುಡುಕಿದಾಗ, ಹಲವರು ಇದೇ ವಿಡಿಯೊವನ್ನು ಹಂಚಿಕೊಂಡಿರುವುದು ಕಂಡು ಬಂತು. ಇದೇ ವಿಡಿಯೊ 2023ರ ಜುಲೈ 29ರಂದು ‘ಪಾಪ್ಯುಲರ್ //ಹಳ್ಳಿಡೇ ಗಂಜ್//’ ಎಂಬ ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವುದು ಸಿಕ್ಕಿತು. ಆ ಪೋಸ್ಟ್ನಲ್ಲಿ ಯಾವುದೇ ವಿವರಗಳು ಇರಲಿಲ್ಲ. ಆದರೆ, ಈಗ ಹಂಚಿಕೊಳ್ಳುತ್ತಿರುವ ವಿಡಿಯೊ ಇದುವೇ ಎಂಬುದು ಖಚಿತವಾಯಿತು. ಇನ್ನಷ್ಟು ಹುಡುಕಿದಾಗ, ‘ಕೈನಿಂಗ್ ನ್ಯೂಸ್’ ಎಂಬ ಫೇಸ್ಬುಕ್ ಖಾತೆಯಲ್ಲಿ ಇದೇ ವಿಡಿಯೊವನ್ನು 2023ರ ಜುಲೈ 9ರಂದು ಅಪ್ಲೋಡ್ ಮಾಡಿದ ಪೋಸ್ಟ್ ಸಿಕ್ಕಿತು. ಅದರಲ್ಲಿ ‘ಚುನಾವಣೆ ದಿನ ಕೈನಿಂಗ್ನ ಬಸಂತಿಯಲ್ಲಿನ ಪರಿಸ್ಥಿತಿಯನ್ನು ನೋಡಿ’ ಎಂಬ ಒಕ್ಕಣೆ ಬಂಗಾಳಿ ಭಾಷೆಯಲ್ಲಿತ್ತು. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾಟ ನಡೆಸಿದಾಗ ನೆಟ್ವರ್ಕ್ 18 ಬಾಂಗ್ಲಾ ಪ್ರಕಟಿಸಿದ್ದ ವಿಡಿಯೊ ವರದಿ ಸಿಕ್ಕಿತು. ಪಶ್ಚಿಮ ಬಂಗಾಳದ ಪಂಚಾಯಿತಿ ಚುನಾವಣೆಯಲ್ಲಿ ಬಸಂತಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ವರದಿಯಲ್ಲಿ ವಿವರಿಸಲಾಗಿತ್ತು. ಮೂರು ವರ್ಷಗಳಷ್ಟು ಹಳೆಯ ವಿಡಿಯೊವನ್ನು ಈಗಿನ ಚುನಾವಣೆ ತಳಕು ಹಾಕಿ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.