ತಲೆಗೆ ಬ್ಯಾಂಡೇಜು ಹಾಕಿಕೊಂಡಿದ್ದ ಮಹಿಳೆಯೊಬ್ಬರು ಮಾಧ್ಯಮದೊಂದಿಗೆ ಮಾತನಾಡುತ್ತಿದ್ದಾಗ ಒಬ್ಬರು ಆಕೆಯ ತಲೆಗೆ ಕೈಹಾಕಿ ಆ ಬ್ಯಾಂಡೇಜನ್ನು ಕಿತ್ತೆಸೆಯುವ, ಏನೂ ಗಾಯ ಆಗದಿದ್ದರೂ ಸುಮ್ಮನೆ ಬ್ಯಾಂಡೇಜು ಹಾಕಿದ್ದು ಗೊತ್ತಾದ ತಕ್ಷಣ ಉಳಿದ ಕೆಲವರು ಆಕೆಯನ್ನು ಎಳೆದಾಡುವ ವಿಡಿಯೊ ತುಣುಕೊಂದನ್ನು ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ನಂತರ ಹಲವರು ಪೋಸ್ಟ್ ಮಾಡುತ್ತಿದ್ದಾರೆ. ವಿಡಿಯೊದಲ್ಲಿರುವ ಮಹಿಳೆ ಟಿಎಂಸಿ ಕಾರ್ಯಕರ್ತೆ ಎಂದೂ, ತನ್ನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆಕೆ ಸುಳ್ಳು ಆರೋಪ ಮಾಡುತ್ತಾ ನಕಲಿ ಬ್ಯಾಂಡೇಜು ಹಾಕಿದ್ದಾಳೆ ಎಂದೂ ಪ್ರತಿಪಾದಿಸಲಾಗುತ್ತಿದೆ. ಹಲವು ಮಾಧ್ಯಮಗಳು ಈ ಘಟನೆಯ ಬಗ್ಗೆ ವರದಿಯೂ ಮಾಡಿವೆ. ಆದರೆ, ಇದು ಸುಳ್ಳು.

ವಿಡಿಯೊದಲ್ಲಿ ಕಾಣುವ ಮಾಧ್ಯಮದ ಲೋಗೊವನ್ನು ಆಧಾರವಾಗಿಟ್ಟುಕೊಂಡು, ನಿರ್ದಿಷ್ಟ ಪದಗಳನ್ನು ಬಳಸಿ ಫೇಸ್ಬುಕ್ನಲ್ಲಿ ಹುಡುಕಾಡಿದಾಗ ಈಗ ಹಂಚಿಕೊಳ್ಳಲಾಗುತ್ತಿರುವ ವಿಡಿಯೊವನ್ನು ಎಂಡಿಇ (ಮಯೂರ ಧ್ವಜ ಎಕ್ಸ್ಪ್ರೆಸ್) ನ್ಯೂಸ್ ಎಂಬ ಚಾನೆಲ್ ಪೋಸ್ಟ್ ಮಾಡಿ, ‘ಇದು ಬಿಹಾರದ ಮುಜಫ್ಫರ್ಪುರದ ವಿಡಿಯೊ, ಪಶ್ಚಿಮ ಬಂಗಾಳದ್ದಲ್ಲ’ ಎಂದು ಸ್ಪಷ್ಟನೆ ನೀಡಿತ್ತು. ಮುಜಫ್ಫರ್ಪುರ ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಗಲಾಟೆಯ ವಿಡಿಯೊ ಎಂದೂ ಆ ಪೋಸ್ಟ್ನಲ್ಲಿ ಹೇಳಲಾಗಿತ್ತು. ಈ ಘಟನೆಯನ್ನು ವರದಿ ಮಾಡಿದ ಮಯೂರ ಧ್ವಜ ಎಕ್ಸ್ಪ್ರೆಸ್ನ ವರದಿಗಾರ ಪ್ರೇಮ್ ಶಂಕರ್ ಅವರನ್ನು ಸಂಪರ್ಕಿಸಿದಾಗ ಅವರು ಈ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಏಪ್ರಿಲ್ 28ರಂದು ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದ್ದು, ತುರ್ತು ವಿಭಾಗದ ವಾರ್ಡ್ನಲ್ಲಿ ಸ್ಟ್ರೆಚರ್ ನಿರ್ವಹಿಸುವ ಸಿಬ್ಬಂದಿ ಮತ್ತು ರೋಗಿಯೊಬ್ಬರ ಸಂಬಂಧಿಗಳ ನಡುವೆ ನಡೆದ ಗಲಾಟೆಯ ವಿಡಿಯೊ ಅದು ಎಂದು ಅವರು ಹೇಳಿದ್ದಾರೆ ಎಂಬುದಾಗಿ ಬೂಮ್ ಫ್ಯಾಕ್ಟ್ಚೆಕ್ ವರದಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.