ಪಶ್ಚಿಮ ಏಷ್ಯಾ ಬಿಕ್ಕಟ್ಟು ತೀವ್ರವಾಗುತ್ತಿರುವುದರಿಂದ, ದೇಶದ ವಿದೇಶಿ ವಿನಿಮಯ ಮೀಸಲು ಉಳಿಸುವುದಕ್ಕಾಗಿ ಪ್ರಧಾನಿ ಮೋದಿ ಅವರು ಮನೆಯಿಂದಲೇ ಕೆಲಸ ಮಾಡಿ, ಚಿನ್ನ ಖರೀದಿ ಮಾಡಬೇಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಿ ಎಂಬುದೂ ಸೇರಿದಂತೆ ವೆಚ್ಚ ಕಡಿಮೆ ಮಾಡಲು ವಿವಿಧ ಸಲಹೆಗಳನ್ನು ನೀಡಿದ ನಂತರ ಈ ಬಗ್ಗೆ ದೇಶದಾದ್ಯಂತ ಪರ–ವಿರೋಧ ಚರ್ಚೆಗಳು ನಡೆಯುತ್ತಿವೆ. ಹಿಂದೆಯೂ ದೇಶವು ಆರ್ಥಿಕ ಸವಾಲು ಎದುರಿಸಿದ್ದಾಗ ಕಾಂಗ್ರೆಸ್ ಮುಖಂಡರು ಕೂಡ ಇದೇ ರೀತಿಯ ಕರೆ ನೀಡಿದ್ದರು ಎಂದು ಬಿಜೆಪಿ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ವಾದಿಸುತ್ತಿದ್ದಾರೆ. 1967ರಲ್ಲಿ ದೇಶವು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾಗ, ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ರಾಷ್ಟ್ರೀಯ ಶಿಸ್ತು ಪಾಲಿಸುವುದಕ್ಕಾಗಿ ಚಿನ್ನ ಖರೀದಿಸಬೇಡಿ ಎಂದು ಮನವಿ ಮಾಡಿದ್ದರು ಎಂದು ಹೇಳುತ್ತಾ, ‘ದಿ ಹಿಂದೂ’ ಪತ್ರಿಕೆಯದ್ದು ಎನ್ನಲಾದ ಮುಖಪುಟದ ಚಿತ್ರವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಕರ್ನಾಟಕದ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸೇರಿದಂತೆ ಹಲವರು ಈ ಫೋಟೊವನ್ನು ಹಂಚಿಕೊಂಡು, ಕಾಂಗ್ರೆಸ್ ಮುಖಂಡರನ್ನು ಟೀಕಿಸುತ್ತಿದ್ದಾರೆ. ಮಾಧ್ಯಮಗಳು ಕೂಡ ಈ ಬಗ್ಗೆ ವರದಿ ಮಾಡಿವೆ. ಆದರೆ, ಇದು ಸುಳ್ಳು ಮಾಹಿತಿ.

ಈಗ ಹಂಚಿಕೊಳ್ಳಲಾಗುತ್ತಿರುವ ಪತ್ರಿಕೆಯ ಮುಖಪುಟದ ಚಿತ್ರದಲ್ಲಿ 1967ರ ಜೂನ್ 6ರ ದಿನಾಂಕವನ್ನು ಉಲ್ಲೇಖಿಸಲಾಗಿದೆ. Don't by gold, Indira tells people: appeals for 'national discipline' ಎಂಬ ತಲೆಬರಹದ ಅಡಿಯಲ್ಲಿ ಸುದ್ದಿ ಕಾಣಿಸುತ್ತಿದೆ. ಆದರೆ, ಈ ಬಗ್ಗೆ ಸ್ವತಃ ‘ದಿ ಹಿಂದೂ’ ಪತ್ರಿಕೆ ತನ್ನ ಅಧಿಕೃತ ’ಎಕ್ಸ್’ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ಅದು 1967ರ ಜೂನ್ 6ರ ಮುಖಪುಟದ ಅಧಿಕೃತವಾದ ಚಿತ್ರ ಅಲ್ಲ. ಅದು ಡಿಜಿಟಲ್ ತಂತ್ರಜ್ಞಾನ ಬಳಸಿ ಸೃಷ್ಟಿಸಿರುವ ಚಿತ್ರ. ಓದುಗರು ಇದನ್ನು ಹಂಚಿಕೊಳ್ಳುವ ಮೊದಲು ಜಾಗ್ರತೆ ವಹಿಸಿ ಮತ್ತು ಖಚಿತಪಡಿಸಿಕೊಳ್ಳಿ ಎಂದು ಪತ್ರಿಕೆ ಸ್ಪಷ್ಟನೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.