ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಅಂತರದ ಗೆಲುವು ಸಾಧಿಸಿದ ಬಳಿಕ, ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಹಲವು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಈ ಪೈಕಿ ‘ಎಕ್ಸ್’ ಬಳಕೆದಾರ ರಿಷಿ ಬಾಗ್ರೀ ಎಂಬವರು ಹಂಚಿಕೊಂಡಿರುವ ವಿಡಿಯೊವನ್ನು ನಾಲ್ಕು ಲಕ್ಷದಷ್ಟು ಮಂದಿ ವೀಕ್ಷಿಸಿದ್ದು, ಹಲವರು ಹಂಚಿಕೊಳ್ಳುತ್ತಿದ್ದಾರೆ. ಕೋಲ್ಕತ್ತದ ಐತಿಹಾಸಿಕ ಹೌರಾ ಸೇತುವೆಯಲ್ಲಿ ಕಿಕ್ಕಿರಿದು ಸೇರಿರುವ ಜನರು ಸಂಭ್ರಮ ಪಡುತ್ತಿರುವ ವಿಡಿಯೊ ಅದಾಗಿದ್ದು, ಜನರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದೂ ಅದರಲ್ಲಿ ಕೇಳಿಸುತ್ತದೆ. ‘ಹೌರಾ ಸೇತುವೆಯಲ್ಲಿ ಬಿಜೆಪಿ ಗೆಲುವಿನ ಸಂಭ್ರಮಾಚರಣೆ’ ಎಂದು ಪ್ರತಿಪಾದಿಸುತ್ತಾ ರಿಷಿ ಅವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು.

ವಿಡಿಯೊದ ತುಣುಕಿನ ಕೀ ಫ್ರೇಮ್ ಒಂದನ್ನು ಗೂಗಲ್ ಲೆನ್ಸ್ ಬಳಸಿ ಹುಡುಕಿದಾಗ, ಪ್ರಭಾಕರ್ ಗಿರಿಧಾರಿ ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವರ್ಷದ ಮಾರ್ಚ್ 4ರಂದು ಹಂಚಿಕೊಂಡ ವಿಡಿಯೊ ಸಿಕ್ಕಿತು. ಆ ವಿಡಿಯೊ ತುಣುಕಿನಲ್ಲೂ ಹೌರಾ ಸೇತುವೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ಜೈ ಶ್ರೀರಾಮ್ ಘೋಷಣೆ ಕೂಗುವ ದೃಶ್ಯಾವಳಿ ಇತ್ತು. ಈಗ ಹಂಚಿಕೊಳ್ಳಲಾಗುತ್ತಿರುವ ವಿಡಿಯೊ, ಇದೇ ವಿಡಿಯೊ ಎಂಬುದು ಖಚಿತವಾಯಿತು. ಆ ವಿಡಿಯೊವು ಹೋಳಿ ಸಂಭ್ರಮಾಚರಣೆಗೆ ಸಂಬಂಧಿಸಿದ್ದಾಗಿತ್ತು. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಿದಾಗ, 2026ರ ಮಾರ್ಚ್ 1 ರಂದು ‘ಜರ್ನಿ ವಿದ್ ಸುಶ್ಮಿತಾ’ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಲಾದ ಇದೇ ವಿಡಿಯೊ ಸಿಕ್ಕಿತು. ಕೋಲ್ಕತ್ತದಲ್ಲಿ ನಡೆದ ‘2026ರ ರೋಲ್ಸ್ ರಾಯ್ಸ್ ಹೋಳಿ ಸಂಭ್ರಮಾಚರಣೆ’ ಎಂಬ ವಿವರಣೆ ಅದರಲ್ಲಿತ್ತು. ಎರಡು ತಿಂಗಳ ಹಿಂದಿನ ವಿಡಿಯೊ ಇದಾಗಿದ್ದು, ಬಿಜೆಪಿ ಗೆದ್ದಿರುವುದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.