ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ಹಡುಗು ಸಿಲುಕಿಕೊಂಡಿದೆ ಎಂದು ವರದಿಯಾಗಿದೆ. ‘ಭಾರತವು ಮೊದಲು ಇದರ ಹಿಂದೆ ಇರಾನ್ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲಿದೆ. ಅದು ಖಚಿತವಾದರೆ, ಪಾಕಿಸ್ತಾನಕ್ಕಿಂತಲೂ ಕಠೋರವಾದ ಕ್ರಮವನ್ನು ಇರಾನ್ ಎದುರಿಸಲಿದೆ. ಭಾರತದ ವಿರುದ್ಧ ಆಕ್ರಮಣಶೀಲ ವರ್ತನೆ ತೋರಿದರೆ ಇರಾನ್ ಕೂಡ ಕ್ರಮ ಎದುರಿಸಬೇಕಾಗುತ್ತದೆ’ ಎಂದು ರಣಧೀರ್ ಜೈಸ್ವಾಲ್ ಅವರು ಎಚ್ಚರಿಕೆ ನೀಡಿದ್ದಾರೆ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ನಿರ್ದಿಷ್ಟ ಪದದ ಮೂಲಕ ಹುಡುಕಾಟ ನಡೆಸಿದಾಗ, ರಣಧೀರ್ ಜೈಸ್ವಾಲ್ ಅವರು ಈ ರೀತಿ ಹೇಳಿದ್ದಾರೆ ಎನ್ನುವುದಕ್ಕೆ ಯಾವುದೇ ನಂಬಲರ್ಹ ವರದಿಗಳು ಲಭ್ಯವಾಗಲಿಲ್ಲ. ಈ ಹುಡುಕಾಟವು ಪಿಟಿಐ 2026ರ ಮಾರ್ಚ್ 11ರಂದು ಪ್ರಕಟಿಸಿರುವ ವಿಡಿಯೊಕ್ಕೆ ಸಂಪರ್ಕ ಕಲ್ಪಿಸಿತು. ಅದು ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊವನ್ನೇ ಹೋಲುತ್ತಿದೆ. ಆದರೆ, ಈ ವಿಡಿಯೊದಲ್ಲಿ ರಣಧೀರ್ ಜೈಸ್ವಾಲ್ ಅವರು ಇರಾನ್ಗೆ ಎಚ್ಚರಿಕೆ ನೀಡುವಂಥ ಯಾವುದೇ ಮಾತು ಆಡಿಲ್ಲ. ರಿಸೆಂಬಲ್ ಎಐ ಮತ್ತು ಹಿಯಾ ಎಐ ಪತ್ತೆ ಸಾಧನಗಳ ಮೂಲಕ ವಿಡಿಯೊ ಅನ್ನು ಪರೀಕ್ಷಿಸಿದಾಗ, ವಿಡಿಯೊ ಅನ್ನು ಎಐ ನೆರವಿನಿಂದ ಮಾರ್ಪಡಿಸಲಾಗಿದೆ ಎನ್ನುವುದು ತಿಳಿಯಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಡಿಯೊ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಇದು ಡೀಪ್ಫೇಕ್ ವಿಡಿಯೊ ಎಂದು ಹೇಳಿದೆ ಎಂಬುದಾಗಿ ಫ್ಯಾಕ್ಟ್ಲಿ ಫ್ಯಾಕ್ಟ್ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.