ಹೊರ್ಮುಜ್ ಜಲಸಂಧಿಯ ಮೂಲಕ ಭಾರತದತ್ತ ಬರುತ್ತಿದ್ದ ತೈಲ ತುಂಬಿದ ಹಡಗಿನ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂದು ಪ್ರತಿಪಾದಿಸುತ್ತಾ ಇರಾನ್ ಪ್ರೆಸ್ (@GP_Presss) ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೊ ಒಂದನ್ನು ಪೋಸ್ಟ್ ಮಾಡಲಾಗಿದೆ. ದಾಳಿಯಲ್ಲಿ ಹಡಗಿನ ಮುಂಭಾಗದ ಗಾಜಿಗೆ ಹಾನಿಯಾಗುವ ದೃಶ್ಯ ವಿಡಿಯೊದಲ್ಲಿದೆ. ಆದರೆ, ಇದು ಸುಳ್ಳು.

ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಿದಾಗ, ಭಾರತದ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿರುವ ಬಗ್ಗೆ ವಿಶ್ವಾಸಾರ್ಹ ವರದಿಗಳು ಸಿಗಲಿಲ್ಲ. ವಿಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ದಾಳಿ ನಡೆದ ಸಂದರ್ಭದಲ್ಲಿ ಹಡಗಿನ ಸಿಬ್ಬಂದಿಯ ವರ್ತನೆಯನ್ನು ನೋಡುವಾಗ ಅನುಮಾನ ಮೂಡಿತು. ವಿಡಿಯೊದ ಅಸಲಿತನವನ್ನು ದೃಢಪಡಿಸುವುದಕ್ಕಾಗಿ, ವಿಡಿಯೊ ತುಣುಕನ್ನು ಎಐ ಪತ್ತೆ ಟೂಲ್ ಡೀಪ್ಫೇಕ್ ಒ–ಮೀಟರ್ ಮೂಲಕ ಪರಿಶೀಲನೆಗೆ ಒಳಪಡಿಸಲಾಯಿತು. ವಿಡಿಯೊ ಶೇ 100ರಷ್ಟು ಡೀಪ್ಫೇಕ್ ಎಂದು ಅದು ತಿಳಿಸಿತು. ಹೈವ್ ಮಾಡರೇಷನ್ ಎಂಬ ಮತ್ತೊಂದು ಟೂಲ್ ಮೂಲಕ ಪರಿಶೀಲಿಸಿದಾಗಲೂ ವಿಡಿಯೊ ಎಐ ಸೃಷ್ಟಿ ಎಂಬುದು ದೃಢಪಟ್ಟಿತು. ಎಐ ಮೂಲಕ ಸೃಷ್ಟಿಸಿದ ವಿಡಿಯೊವನ್ನು ಪೋಸ್ಟ್ ಮಾಡಿ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.