ಸುದ್ದಿ ವಾಹಿನಿಯೊಂದರ ನಿರೂಪಕನೊಬ್ಬ ಸುದ್ದಿ ವಿಶ್ಲೇಷಣೆ ಮಾಡುವಾಗ ಉದ್ರಿಕ್ತನಾಗಿ ವರ್ತಿಸುವ, ಎದ್ದುನಿಂತು ಕೂಗಾಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇರಾನ್ ಮತ್ತು ಅಮೆರಿಕ ನಡುವಿನ ಕದನವಿರಾಮದ ಸಂಬಂಧ ಪಾಕಿಸ್ತಾನವು ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಅದರಿಂದ ಭಾರತದ ಸುದ್ದಿ ವಾಹಿನಿಯ ನಿರೂಪಕ ತಾಳ್ಮೆ ಕಳೆದುಕೊಂಡಿದ್ದಾರೆ ಎಂದು ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊದ ಕೀಫ್ರೇಮ್ ಅನ್ನು ರಿವರ್ಸ್ ಇಮೇಜ್ ಸರ್ಚ್ ಮತ್ತು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ, ಹಲವರು ಈ ವಿಡಿಯೊ ಅನ್ನು ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ಕಂಡಿತು. ನಿರ್ದಿಷ್ಟ ಪದದ ಮೂಲಕ ಗೂಗಲ್ನಲ್ಲಿ ಹುಡುಕಾಡಿದಾಗ, ಪ್ರತಿಪಾದನೆಯನ್ನು ಸಮರ್ಥಿಸುವಂಥ ಯಾವುದೇ ವರದಿ ಸಿಗಲಿಲ್ಲ. ಸ್ಕ್ರೀನ್ ಮೇಲೆ ಸುದ್ದಿ ವಾಹಿನಿಯ ಹೆಸರೇನಾದರೂ ಕಾಣುವುದೇ ಎಂದು ವಿಡಿಯೊ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೂ, ಸ್ಪಷ್ಟವಾಗಿ ಏನೂ ಕಾಣಲಿಲ್ಲ. ವಿಡಿಯೊವನ್ನು ಮತ್ತಷ್ಟು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಪರದೆ ಮೇಲಿನ ಅಕ್ಷರಗಳಲ್ಲಿ ವ್ಯತ್ಯಾಸಗಳಿರುವುದು ಕಂಡಿತು. ವಿಡಿಯೊ ಅನ್ನು ಹೈವ್ ಮಾಡರೇಷನ್ ಮತ್ತು ಡಿಟೆಕ್ಟಿವ್ ಎಐ ಎನ್ನುವ ಎಐ ಪತ್ತೆ ಸಾಧನಗಳ ಮೂಲಕ ಪರೀಕ್ಷಿಸಿದಾಗ, ಅದು ಎಐ ನಿರ್ಮಿತ ವಿಡಿಯೊ ಎನ್ನುವುದು ಖಚಿತವಾಯಿತು. ಎಐ ವಿಡಿಯೊ ಅನ್ನು ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದ್ದಾರೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.