ದೇವಸ್ಥಾನಕ್ಕೆ ಮಾಂಸ ತಂದ ಮುಸ್ಲಿಮರಿಗೆ ಪುರೋಹಿತರು ಸರಿಯಾದ ಪಾಠ ಕಲಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಒಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಕೆಲವರು ದೇವಸ್ಥಾನದ ಆವರಣದಲ್ಲಿ ಹೊಡೆದಾಡುತ್ತಿರುವ ದೃಶ್ಯ ಕಾಣಬಹುದು.

ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘ಕೊಲ್ಲಾಪುರ ದೇವಸ್ಥಾನದಲ್ಲಿ ಭಕ್ತರ ಮೇಲೆ ಮಾಂಸ ಎಸೆದು ಅಲ್ಲ ಹೂ ಅಕ್ಬರ್ ಅಂತ ಕೂಗಿದ ಜಿಹಾದಿಗೆ ಪುರೋಹಿತರು ಮತ್ತು ಅಲ್ಲಿರುವ ಭಕ್ತರು ಸರಿಯಾಗಿ ಅವನ ತಲೆಗೆ ತೆಂಗಿನಕಾಯಿ ಒಡೆದಿದ್ದಾರೆ. ಅಬ್ದುಲ್ಲ ಬದುಕುವ ಸ್ಥಿತಿಯಲ್ಲಿ ಇಲ್ಲ ಯಾ ಹುಲ್ಲ’ ಎಂದು ಬರೆದುಕೊಂಡಿದ್ದಾರೆ.

ಆದರೆ, ಈ ವೈರಲ್ ವಿಡಿಯೊದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಪರಿಶೀಲನೆ ನಡೆಸಿದಾಗ, ವಿಡಿಯೊವನ್ನು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ತಿಳಿದುಬಂದಿದೆ. ವಾಸ್ತವವಾಗಿ, ಈ ಘಟನೆ ದೇವಸ್ಥಾನದಲ್ಲಿ ಮಾಂಸ ಎಸೆದ ವಿಚಾರಕ್ಕೆ ಸಂಬಂಧಿಸಿದದ್ದೇ ಅಲ್ಲ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ವಾದಿರತ್ನಗಿರಿಯಲ್ಲಿರುವ ಜ್ಯೋತಿಬಾ ದೇವಸ್ಥಾನದಲ್ಲಿ, 15 ರಿಂದ 20 ಪುರೋಹಿತರು ಮತ್ತು ಯುವ ಭಕ್ತರ ನಡುವೆ ನಡೆದ ಗಲಾಟೆ ಇದಾಗಿದೆ.

ಸತ್ಯವನ್ನು ತಿಳಿಯಲು ನಾವು ವಿಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಇದೇ ವಿಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಅನೇಕ ಸುದ್ದಿ ಸಂಸ್ಥೆ ವರದಿ ಮಾಡಿರುವುದು ಕಂಡುಬಂತು.

ಆಜ್ ತಕ್ ಮಾರ್ಚ್ 23, 2026 ರಂದು ಪ್ರಕಟಿಸಿದ ವರದಿಯಲ್ಲಿ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಜ್ಯೋತಿಬಾ ದೇವಸ್ಥಾನದಲ್ಲಿ ಪುರೋಹಿತರು ಮತ್ತು ಭಕ್ತರ ನಡುವೆ ನಡೆದ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಟ್ರಸ್ಟ್ ಪ್ರಕಾರ, ಪರಿತೆ ಗ್ರಾಮದ 50 ಕ್ಕೂ ಹೆಚ್ಚು ಭಕ್ತರು ಶ್ರೀ ಕ್ಷೇತ್ರ ಜ್ಯೋತಿಬಾ ದೇವಾಲಯ ಸಂಕೀರ್ಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ತಂಗಿದ್ದರು. ಈ ಯುವಕರಲ್ಲಿ ಕೆಲವರು ದೇವಾಲಯದ ಪ್ರದೇಶದಲ್ಲಿ ಗುಲಾಲ್ (ಬಣ್ಣದ ಪುಡಿ) ಮತ್ತು ತೆಂಗಿನಕಾಯಿಗಳನ್ನು ಎಸೆಯುವ ಮೂಲಕ ಇತರ ಭಕ್ತರಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಇದು ಅರ್ಚಕರನ್ನು ತೊಂದರೆಗೊಳಿಸಿತು, ಅರ್ಚಕರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದಾಗ, ಗಲಾಟೆ ನಡೆಯಿತು ಎಂಬ ಮಾಹಿತಿ ಇದರಲ್ಲಿದೆ.

NDTV ಕೂಡ ಈ ಘಟನೆ ಕುರಿತು ವರದಿ ಮಾಡಿದ್ದು, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಜ್ಯೋತಿಬಾ ದೇವಸ್ಥಾನದಲ್ಲಿ ಭಕ್ತರ ಮೇಲೆ ಪೂಜಾರಿಗಳು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನದ ಒಳಗೆ ಕೆಲ ಭಕ್ತರನ್ನು ಎಳೆದಾಡಿ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಘಟನೆಗೆ ಸಂಬಂಧಿಸಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಪೋಸ್ಟ್ನಲ್ಲಿ ನೀಡಿರುವ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ದೇವಸ್ಥಾನದಲ್ಲಿ ಭಕ್ತರ ಮೇಲೆ ಮಾಂಸ ಎಸೆಯಲಾಗಿದೆ ಎಂಬುದಕ್ಕೂ, ವಿಡಿಯೋದಲ್ಲಿ ನಡೆದಿರುವ ಗಲಾಟೆಗೂ ಯಾವುದೇ ಸಂಬಂಧವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.