ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಕುರ್ಚಿಯಲ್ಲಿ ಕುಳಿತುಕೊಳ್ಳಲು ಸೋನಿಯಾ ಅನುಮತಿಗೆ ಕಾದಿದ್ದರೇ ಖರ್ಗೆ?

Published 10 ಮೇ 2023, 19:35 IST
Last Updated 10 ಮೇ 2023, 19:35 IST
ಅಕ್ಷರ ಗಾತ್ರ

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಭಾಗಿಯಾಗಿದ್ದರು. ವೇದಿಕೆಯ ಮೇಲೆ ಹಾಕಲಾಗಿದ್ದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಖರ್ಗೆ ಅವರು ಸೋನಿಯಾ ಅವರ ಅನುಮತಿಗಾಗಿ ಕಾಯುತ್ತಿದ್ದರು ಎಂದು ಹೇಳಲಾಗುವ 18 ಸೆಕೆಂಡ್‌ನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವರು ಈ ವಿಡಿಯೊ ಹಂಚಿಕೊಂಡಿದ್ದಾರೆ. ಬಿಜೆಪಿ ಜಾಲತಾಣ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಈ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ‘ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮತ ನೀಡಿದರೆ, ‘ಸೋನಿಯಾ–ರಾಹುಲ್ ನೇರ ಆಳ್ವಿಕೆ ನಡೆಸುತ್ತಾರೆ. ಯೋಚಿಸಿ ಮತನೀಡಿ’ ಎಂದು ಬರೆದಿದ್ದಾರೆ. ಆದರೆ, ಇದು ತಪ್ಪು ಮಾಹಿತಿ.

ವಿಡಿಯೊ ಜೊತೆಗೆ ಹೇಳಿರುವಂತೆ ಖರ್ಗೆ ಅವರು ಕುಳಿತುಕೊಳ್ಳಲು ಸೋನಿಯಾ ಅವರ ಅನುಮತಿಗೆ ಕಾದಿದ್ದರು ಎಂಬುದು ತಪ್ಪು ಮಾಹಿತಿ ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ. ಪೂರ್ಣ ವಿಡಿಯೊವನ್ನು ಗಮನಿಸಿದರೆ ಸತ್ಯಾಂಶ ತಿಳಿಯುತ್ತದೆ. ಸೋನಿಯಾ ಅವರು ಭಾಷಣ ಮುಗಿಸಿ ತಮ್ಮ ಆಸನದತ್ತ ವಾಪಸಾದರು. ಆಗ, ಮುಂದಿನ ಭಾಷಣ ಮಾಡಬೇಕಿದ್ದ ಖರ್ಗೆ ಅವರು ಎದ್ದು ನಿಂತಿದ್ದರು. ನಿರೂಪಕರ ಮಾತು ಪೂರ್ಣಗೊಳ್ಳುವರೆಗೆ ಖರ್ಗೆ ಸೋನಿಯಾ ಅವರ ಪಕ್ಕದಲ್ಲಿ ನಿಂತಿದ್ದರು. ನಿರೂಪಕರ ಮಾತು ಪೂರ್ಣಗೊಂಡ ನಂತರ ಖರ್ಗೆ ಅವರು ಮೈಕ್‌ನತ್ತ ಧಾವಿಸಿದ ದೃಶ್ಯವು ಪೂರ್ಣ ವಿಡಿಯೊದಲ್ಲಿದೆ ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT