‘ಮಣಿಪುರದಲ್ಲಿ ಇತ್ತೀಚೆಗೆ ಸ್ಥಾಪಿಸಲಾಗಿರುವ ಅಸ್ಸಾಂ ರೈಫಲ್ಸ್ ಕ್ಯಾಂಪ್ನ ಮೇಲೆ ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರು ದಾಳಿ ನಡೆಸಿದ್ದಾರೆ’ ಎಂದು ಪ್ರತಿಪಾದಿಸುತ್ತಾ ಜಾವೇದ್ ಇಕ್ಬಾಲ್ ಎಂಬ ‘ಎಕ್ಸ್’ ಬಳಕೆದಾರ ವಿಡಿಯೊ ತುಣುಕೊಂದನ್ನು ಇತ್ತೀಚೆಗೆ ಹಂಚಿಕೊಂಡಿದ್ದು, ಬೆಟ್ಟದ ವ್ಯಾಪ್ತಿಯಲ್ಲಿರುವ ಒಂದು ಕ್ಯಾಂಪ್ ಹೊತ್ತಿ ಉರಿಯುತ್ತಿರುವ ದೃಶ್ಯ ವಿಡಿಯೊದಲ್ಲಿ ಕಾಣಿಸುತ್ತಿದೆ. ಆದರೆ, ಇದು ಸುಳ್ಳು.

ಇಂತಹ ಘಟನೆ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿದೆಯೇ ಎಂಬುದನ್ನು ಪರಿಶೀಲಿಸಲು ನಿರ್ದಿಷ್ಟ ಪದಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟ ನಡೆಸಲಾಯಿತು. ಆದರೆ, ವಿಶ್ವಾಸಾರ್ಹ ವರದಿಗಳು ಎಲ್ಲೂ ಪ್ರಕಟವಾಗಲಿಲ್ಲ. ವಿಡಿಯೊ ತುಣುಕಿನ ಕೀಫ್ರೇಮ್ ಒಂದನ್ನು ಗೂಗಲ್ ಲೆನ್ಸ್ ಮೂಲಕ ರಿವರ್ಸ್ ಸರ್ಚ್ ವಿಧಾನದಲ್ಲಿ ಹುಡುಕಿದಾಗ ಭಾರತ–ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ 2026ರ ಮೇ 2ರಂದು ಮಾಡಿದ ಪೋಸ್ಟ್ ಸಿಕ್ಕಿತು. ಆ ಪೋಸ್ಟ್ನಲ್ಲಿ ಹಲವು ಚಿತ್ರಗಳು ಮತ್ತು ವಿಡಿಯೊ ತುಣುಕು ಇತ್ತು. ಅದು ಈಗ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊವೇ ಆಗಿತ್ತು. ಲೇಹ್ನ ಸಿಂಧೂ ನದಿ ದಂಡೆಯ ಚೋಗ್ಲಮಸರ್ ಅರಣ್ಯ ಪ್ರದೇಶದಲ್ಲಿ ಕಂಡು ಬಂದ ಕಾಳ್ಗಿಚ್ಚಿನ ವಿಡಿಯೊ ಎಂಬ ವಿವರಣೆ ಆ ಪೋಸ್ಟ್ನಲ್ಲಿತ್ತು. ಲೇಹ್ನಲ್ಲಿರುವ ಐಟಿಬಿಪಿ ಸಿಬ್ಬಂದಿ ಆ ಬೆಂಕಿಯನ್ನು ನಂದಿಸಿರುವ ವಿವರಗಳೂ ಅದರಲ್ಲಿದ್ದವು. ಮಣಿಪುರಕ್ಕೂ ಈ ವಿಡಿಯೊಗೂ ಸಂಬಂಧವಿಲ್ಲ. ಲೇಹ್ ಕಾಳ್ಗಿಚ್ಚಿನ ವಿಡಿಯೊವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.