ಪ್ರಧಾನಿ ನರೇಂದ್ರ ಮೋದಿ ಅವರು ಹೋಟೆಲ್ ಒಂದರಲ್ಲಿ ಮುಖಕ್ಕೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೊವೊಂದು ಸೋರಿಕೆಯಾಗಿದೆ ಎಂದು ಪ್ರತಿಪಾದಿಸುತ್ತಾ ‘ಎಕ್ಸ್’ನಲ್ಲಿ ಒಂದು ವಿಡಿಯೊ ತುಣುಕನ್ನು ಪೋಸ್ಟ್ ಮಾಡಲಾಗಿದೆ. ಇದನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊ ತುಣುಕಿನ ಕೀಫ್ರೇಮ್ ಒಂದನ್ನು ಗೂಗಲ್ ಲೆನ್ಸ್ ಬಳಸಿ ರಿವರ್ಸ್ ಸರ್ಚ್ ವಿಧಾನದಲ್ಲಿ ಹುಟುಕಾಟ ನಡೆಸಿದಾಗ ಪರ್ದೀಪ್ ಕೌರ್ ಧಿಲ್ಲಾನ್ ಎಂಬ ಕಂಟೆಂಟ್ ಕ್ರಿಯೇಟರ್, ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಇದೇ ವಿಡಿಯೊವನ್ನು ಪೋಸ್ಟ್ ಮಾಡಿರುವುದು ಕಂಡು ಬಂತು. ಇನ್ಸ್ಟಾಗ್ರಾಂ ಖಾತೆಯಲ್ಲಿ ಇದೇ 12ರಂದು ವಿಡಿಯೊವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ #ಮಸಾಜ್ಟೈಮ್ #ರಿಲ್ಯಾಕ್ಸ್ಮೋಡ್ #ಸೆಲ್ಫ್ಕೇರ್ ಮುಂತಾದ ಹ್ಯಾಷ್ಟ್ಯಾಗ್ಗಳನ್ನೂ ಬಳಸಿದ್ದರು.

ಫೇಸ್ಬುಕ್ನ ಅವರ ಖಾತೆಯನ್ನು ಪರಿಶೀಲಿಸಿದಾಗ ಅವರು, ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಯಿತು. ಅವರ ಖಾತೆಯಲ್ಲಿನ ಇತರ ಪೋಸ್ಟ್ಗಳನ್ನು ಗಮನಿಸಿದಾಗ, ಈ ವಿಡಿಯೊದಲ್ಲಿರುವುದು (ಮಸಾಜ್ ಮಾಡಿಸಿಕೊಳ್ಳುತ್ತಿರುವವರು) ಅವರ ಪತಿ ಜಸ್ಪಾಲ್ ಸಿಂಗ್ ಸರಾಯ್ ಎಂಬುದು ಗೊತ್ತಾಯಿತು. ಧಿಲ್ಲೋನ್ ಅವರು ತಮ್ಮ ಹಲವು ಪೋಸ್ಟ್ಗಳಲ್ಲಿ ಸರಾಯ್ ಅವರನ್ನು ಟ್ಯಾಗ್ ಕೂಡ ಮಾಡಿದ್ದಾರೆ. ಹಾಗಾಗಿ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿರುವವರು ಮೋದಿ ಅವರಲ್ಲ ಎಂದು ಬೂಮ್ ಫ್ಯಾಕ್ಟ್ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.