ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕಾರ್ಯಕ್ರಮ ಹಾಳು ಮಾಡಲು ಕುಸ್ತಿಪಟುಗಳು ಪ್ರತಿಭಟಿಸಿದರು ಎಂಬುದು ನಿಜವೇ?

Fact-Check
Published 29 ಮೇ 2023, 21:59 IST
Last Updated 29 ಮೇ 2023, 21:59 IST
ಅಕ್ಷರ ಗಾತ್ರ

ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಕುಸ್ತಿಪಟುಗಳ ಹೋರಾಟವು ರಾಜಕೀಯ ಪ್ರೇರಿತವಾದುದು ಎಂಬ ಆರೋಪವಿದೆ. ನೂತನ ಸಂಸತ್ ಭವನದ ಉದ್ಘಾಟನೆ ಸಂದರ್ಭದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಕುಸ್ತಿಪಟುಗಳನ್ನು ಬಸ್‌ನಲ್ಲಿ ಕರೆದೊಯ್ಯುವಾಗ ಅವರು ನಗುತ್ತಿದ್ದರು. ಮೋದಿ ಕಾರ್ಯಕ್ರಮವನ್ನು ಹಾಳು ಮಾಡುವ ಉದ್ದೇಶ ಈಡೇರಿತು ಎಂಬುದು ಅವರ ನಗುವಿನ ಅರ್ಥವಾಗಿತ್ತು ಎಂಬ ವಿವರಗಳಿರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಇದು ಸುಳ್ಳು ಸುದ್ದಿ ಮತ್ತು ತಿರುಚಲಾದ ಚಿತ್ರ.

ಕುಸ್ತಿಪಟುಗಳನ್ನು ಪೊಲೀಸರು ಬಸ್‌ನಲ್ಲಿ ಕರೆದೊಯ್ಯುತ್ತಿರುವ ಚಿತ್ರವನ್ನು ಮೇ 28ರ ಮಧ್ಯಾಹ್ನ 12.31ಕ್ಕೆ ಮನಿಂದರ್ ಪೂನಿಯಾ ಎಂಬವರು ಮೊದಲು ಟ್ವೀಟ್ ಮಾಡಿದ್ದರು. ಇದು ಮೂಲ ಚಿತ್ರ. ಈ ಚಿತ್ರದಲ್ಲಿರುವ ನಾಲ್ವರು ಕುಸ್ತಿಪಟುಗಳೂ ನಗುತ್ತಿಲ್ಲ. ಆದರೆ, ತಿರುಚಲಾದ ಚಿತ್ರದಲ್ಲಿ ನಾಲ್ವರು ಕುಸ್ತಿಪಟುಗಳೂ ನಗುತ್ತಿದ್ದಾರೆ. ಇದನ್ನು ಅಭಿಜಿತ್ ಮಜುಂದಾರ್ ಎಂಬವರು ಮೇ 28ರ ಸಂಜೆ 4.28ಕ್ಕೆ ಟ್ವೀಟ್‌ ಮಾಡಿದ್ದಾರೆ. ತಿರುಚಲಾದ ಈ ಚಿತ್ರವು ಮೊದಲು ಪ್ರಕಟವಾದದ್ದು ಅಭಿಜಿತ್ ಅವರ ಟ್ವಿಟರ್‌ ಖಾತೆಯಲ್ಲಿಯೇ. ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಕೆಲವು ಕುಸ್ತಿಪಟುಗಳು ಹೇಳಿದ್ದಾರೆ.

ತಿರುಚಲಾದ ಚಿತ್ರ
ತಿರುಚಲಾದ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT