ಭಾರತದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರು ಪೊಲೀಸ್ ಸಮವಸ್ತ್ರ ಧರಿಸಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಸೌರವ್ ಗಂಗೂಲಿ–ದಿ ರಾಯಲ್ ಬೆಂಗಾಲ್ ಟೈಗರ್ ಆಫ್ ಇಂಡಿಯಾ’ ಎಂಬ ಫೇಸ್ಬುಕ್ ಪುಟದಲ್ಲಿ ಈ ಪೋಟೊ ಪೋಸ್ಟ್ ಮಾಡಲಾಗಿದ್ದು, ‘ಕೇರಳ ಪೊಲೀಸ್ ಇಲಾಖೆ ಸಂಜು ಅವರನ್ನು ಡಿಎಸ್ಪಿಯಾಗಿ ನೇಮಕ ಮಾಡಿಕೊಳ್ಳುವ ಮೂಲಕ ಕ್ರಿಕೆಟಿಗನನ್ನು ಗೌರವಿಸಿದೆ. ಈ ಮೂಲಕ ಸಂಜು ಸ್ಯಾಮ್ಸನ್ ಅವರು ಕೂಡ ಪೊಲೀಸ್ ಇಲಾಖೆ ಅಥವಾ ಸಶಸ್ತ್ರ ಪಡೆಗಳಲ್ಲಿ ಗೌರವ ಹುದ್ದೆಗಳನ್ನು ಪಡೆದ ಕ್ರಿಕೆಟಿಗರ ಸಾಲಿಗೆ ಸೇರಿದ್ದಾರೆ’ ಎಂದು ಪೋಸ್ಟ್ನಲ್ಲಿ ಪ್ರತಿಪಾದಿಸಲಾಗಿದೆ. ಆದರೆ, ಇದು ಸುಳ್ಳು.

ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಿದಾಗ ಸಂಜು ಸ್ಯಾಮ್ಸನ್ ಅವರನ್ನು ಕೇರಳ ಪೊಲೀಸ್ ಇಲಾಖೆ ಡಿಎಸ್ಪಿಯಾಗಿ ನೇಮಕ ಮಾಡಿದೆ ಎಂಬುದರ ಬಗ್ಗೆ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಸಿಗಲಿಲ್ಲ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಖಂಡಿತವಾಗಿಯೂ ಈ ವಿಚಾರ ಸುದ್ದಿಯಾಗುತ್ತಿತ್ತು. ಸಂಜು ಅವರ ಅಧಿಕೃತ ‘ಎಕ್ಸ್’ ಖಾತೆ ಪರಿಶೀಲಿಸಿದಾಗ, ಅಲ್ಲಿ ಇದಕ್ಕೆ ಪೂರಕವಾದಂತಹ ಯಾವುದೇ ಪೋಸ್ಟ್, ಚಿತ್ರಗಳು ಇರಲಿಲ್ಲ. ಚಿತ್ರವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅದರ ನೈಜತೆಯ ಬಗ್ಗೆ ಅನುಮಾನ ಬಂತು. ಚಿತ್ರವನ್ನು ಎಐ ಪತ್ತೆ ಟೂಲ್ ಹೈವ್ ಮಾಡರೇಷನ್ ಮೂಲಕ ಪರಿಶೀಲಿಸಿದಾಗ ಅದು ಎಐ ಚಿತ್ರ ಎಂಬುದು ಗೊತ್ತಾಯಿತು. ಡಿಕಾಪಿ ಎಎ ಎಂಬ ಮತ್ತೊಂದು ಎಐ ಪತ್ತೆ ಟೂಲ್ ಬಳಿಸಿ ಪರಿಶೀಲಿಸಿದಾಗಲೂ, ಅದು ಎಐ ಎಂದು ತೋರಿಸಿತು. ಡೀಪ್ ಫೇಕ್ ಚಿತ್ರವನ್ನು ಹಂಚಿಕೊಂಡು ಸಂಜು ಸ್ಯಾಮ್ಸನ್ ಅವರಿಗೆ ಡಿಎಸ್ಪಿ ಹುದ್ದೆ ನೀಡಲಾಗಿದೆ ಎಂದು ಸುಳ್ಳು ಹರಡಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.