ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವನ್ನು ನಿಲ್ಲಿಸಲು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ ಎಂದು ಪ್ರತಿಪಾದಿಸುತ್ತಾ ಪಾಕಿಸ್ತಾನ ಪರವಾಗಿರುವ @ಇನ್ಸೈಡರ್ಡಬ್ಲ್ಯುಬಿ ಎಂಬ ‘ಎಕ್ಸ್’ ಖಾತೆಯಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಪಾಕಿಸ್ತಾನದ ಕೆಲವು ಪತ್ರಕರ್ತರು ಕೂಡ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಶಶಿ ತರೂರ್ ಅವರು ಸುದ್ದಿ ಚಾನೆಲ್ ಒಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ದೃಶ್ಯ ವಿಡಿಯೊದಲ್ಲಿದೆ. ಆದರೆ, ಇದು ಸುಳ್ಳು.

ವಿಡಿಯೊದ ಕೀಫ್ರೇಮ್ ಒಂದನ್ನು ರಿವರ್ಸ್ ಸರ್ಚ್ ವಿಧಾನದಲ್ಲಿ ಹುಡುಕಾಟ ನಡೆಸಿದಾಗ, ಪತ್ರಕರ್ತ ರಾಜ್ದೀಪ್ ದೇಸಾಯಿ ಅವರು ಶಶಿ ತರೂರ್ ಅವರೊಂದಿಗೆ ನಡೆಸಿದ ವಿಡಿಯೊ ಸಂದರ್ಶನದ ಲಿಂಕ್ ಸಿಕ್ಕಿತು. ಇಂಡಿಯಾ ಟುಡೇಯಲ್ಲಿ 2025ರ ಡಿಸೆಂಬರ್ 26ರಂದು ಆ ಸಂದರ್ಶನ ಪ್ರಕಟವಾಗಿತ್ತು. ಆ ವಿಡಿಯೊದಲ್ಲಿ ಶಶಿ ತರೂರ್ ಅವರು ಈಗ ಎಕ್ಸ್ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೊದಲ್ಲಿರುವ ಧಿರಿಸಿನಲ್ಲೇ ಇರುವುದು ಕಾಣಿಸುತ್ತದೆ. ವಿಡಿಯೊದ ಹಿನ್ನೆಲೆಯೂ ಅದೇ. ಈಗ ಪೋಸ್ಟ್ ಮಾಡಲಾಗಿರುವ ವಿಡಿಯೊದಲ್ಲಿ ‘ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಸೋಲು’ ಎಂಬ ತಲೆಬರಹ ನೀಡಲಾಗಿದೆ. ಮೂಲ ವಿಡಿಯೊದಲ್ಲಿ ಅದಿಲ್ಲ. ಅನುಮಾನ ಬಂದು, ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊದಲ್ಲಿರುವ ತರೂರ್ ಅವರ ಧ್ವನಿಯ ಮಾದರಿಯನ್ನು ಎಐ ಪತ್ತೆ ಟೂಲ್ ಹಿಯಾದಲ್ಲಿ ಹಾಕಿ ಪರಿಶೀಲಿಸಿದಾಗ, ಅದು ಡಿಜಿಟಲ್ ತಂತ್ರಜ್ಞಾನದಲ್ಲಿ ತಿರುಚಿದ ಧ್ವನಿ ಎಂಬುದು ದೃಢಪಟ್ಟಿತು. ಡೀಪ್ಫೇಕ್ ವಿಡಿಯೊವನ್ನು ಹಂಚಿಕೊಂಡು ಸುಳ್ಳು ಮಾಹಿತಿ ಹಂಚಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.