ಇಸ್ರೇಲ್ ರಾಜಧಾನಿ ಟೆಲ್ ಅವಿವ್ನಲ್ಲಿ ಸಾವಿರಾರು ಕಾಗೆಗಳು ಹಾರಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದೆ, ಇದು ‘ಅಶುಭ ಶಕುನ’ ಅಥವಾ ಮುಂಬರುವ ವಿನಾಶದ ಸೂಚನೆ ಎಂದು ಹರಿದಾಡುತ್ತಿದೆ. ಇದನ್ನು ಸಾವಿರಾರು ಮಂದಿ ಎಕ್ಸ್, ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅದು ಸುಳ್ಳು.

ಸಾವಿರಾರು ಪಕ್ಷಿಗಳು ಆಕಾಶವನ್ನು ಆವರಿಸಿರುವ ದೃಶ್ಯ ನಿಜವಾಗಿದ್ದರೂ, ಅದಕ್ಕೆ ಧಾರ್ಮಿಕವಾಗಿ ಸಂಬಂಧವಿಲ್ಲ. ಮುಂಬರುವ ವಿನಾಶದ ಮುನ್ಸೂಚನೆ ಎಂಬ ವಾದವೂ ಸತ್ಯವಲ್ಲ. ಇದು ನೈಸರ್ಗಿಕ ವಿದ್ಯಮಾನ ಎಂದು ತಜ್ಞರು ದೃಢಪಡಿಸಿದ್ದಾರೆ.

ನೈಸರ್ಗಿಕ ವಲಸೆ: ಇಸ್ರೇಲ್ ವಿಶ್ವದ ಅತ್ಯಂತ ಜನನಿಬಿಡ ಪಕ್ಷಿ ವಲಸೆ ಮಾರ್ಗಗಳಲ್ಲಿ ಒಂದಾದ 'ಗ್ರೇಟ್ ರಿಫ್ಟ್ ವ್ಯಾಲಿ ಫ್ಲೈವೇ'ನ ಪ್ರಮುಖ ಕೇಂದ್ರ. ಪ್ರತಿ ವಸಂತಕಾಲದಲ್ಲಿ, ಕಾಗೆಗಳು, ಕೊಕ್ಕರೆಗಳು ಮತ್ತು ಪೆಲಿಕನ್ ಸೇರಿದಂತೆ ಸರಿಸುಮಾರು 50 ಕೋಟಿ ಪಕ್ಷಿಗಳು ಆಫ್ರಿಕಾದಿಂದ ಯುರೋಪ್ ಮತ್ತು ಏಷ್ಯಾದತ್ತ ಈ ಪ್ರದೇಶದ ಮೂಲಕ ಪ್ರಯಾಣಿಸುತ್ತವೆ.

ಗೂಡುಕಟ್ಟುವ ಅವಧಿ: ಮಾರ್ಚ್ ಅಂತ್ಯವು ವಲಸೆಯ ಉತ್ತುಂಗದ ಸಮಯವಾಗಿದೆ. ಸಂತಾನೋತ್ಪತ್ತಿ ಪ್ರಾರಂಭವಾಗುವ ಮೊದಲು ಕಾಗೆಗಳು ಉತ್ತಮ ಗೂಡುಕಟ್ಟುವ ಸ್ಥಳಗಳನ್ನು ಹುಡುಕಲು, ಆಹಾರಕ್ಕಾಗಿ ದೊಡ್ಡ ಗುಂಪುಗಳಲ್ಲಿ ಸೇರುತ್ತವೆ.

ನಗರ ಪ್ರದೇಶಗಳಲ್ಲಿ ಆಶ್ರಯ: ಟೆಲ್ ಅವಿವ್ನಂತಹ ನಗರ ಪ್ರದೇಶಗಳಲ್ಲಿ ಪಕ್ಷಿಗಳು ಹೆಚ್ಚಾಗಿ ಗುಂಪುಗೂಡುತ್ತವೆ. ನಗರಗಳು ಶಾಖದ ದ್ವೀಪಗಳಂತೆ ಕಾರ್ಯನಿರ್ವಹಿಸುವುದರಿಂದ, ಇವು ಪಕ್ಷಿಗಳಿಗೆ ಬೆಚ್ಚಗಿನ ವಾತಾವರಣ ನೀಡುತ್ತವೆ. ಮತ್ತು ನೈಸರ್ಗಿಕ ಪರಭಕ್ಷಕಗಳಿಂದ ರಕ್ಷಣೆ ನೀಡುತ್ತವೆ.

ಎ.ಐ ಮತ್ತು ಹಳೆಯ ದೃಶ್ಯಾವಳಿಗಳು: ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಲು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಕೆಲವು ವೈರಲ್ ವೀಡಿಯೊಗಳು AI-ನಿರ್ಮಿತವಾಗಿವೆ. ಕೆಲವೊಂದು ಹಳೆಯ ವಿಡಿಯೊಗಳಾಗಿವೆ ಎಂದು ಅಧಿಕೃತ ಫ್ಯಾಕ್ಟ್ ಚೆಕ್ ಸಂಸ್ಥೆಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.