ತಮಿಳುನಾಡು ಮುಖ್ಯಮಂತ್ರಿಯಾಗಿ ನಟ, ಟಿವಿಕೆ ನಾಯಕ ಜೋಸೆಫ್ ವಿಜಯ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ ಸಮಾರಂಭದಲ್ಲಿ ಅವರು ಕಾಂಗ್ರೆಸ್ ಮುಖಂಡ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದಾರೆ ಎನ್ನಲಾದ ಚಿತ್ರವನ್ನು ದಿನೇಶ್ ಗೋಯಲ್ ಎಂಬ ಫೇಸ್ಬುಕ್ ಬಳಕೆದಾರ ಪೋಸ್ಟ್ ಮಾಡಿದ್ದು, ಇದನ್ನು ಹಲವರು ಹಂಚಿಕೊಂಡಿದ್ದಾರೆ. ‘ಪ್ರಮಾಣ ವಚನ ಸ್ವೀಕಾರದ ನಂತರ ವಿಜಯ್ ಅವರು ರಾಹುಲ್ ಗಾಂಧಿ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದರು’ ಎಂದು ಪೋಸ್ಟ್ನಲ್ಲಿ ಪ್ರತಿಪಾದಿಸಲಾಗಿದೆ. ಆದರೆ ಇದು ಸುಳ್ಳು.

ಪೋಸ್ಟ್ನಲ್ಲಿ ಹೇಳಲಾದ ಸಂಗತಿ ನಿಜವೇ ಎಂಬುದನ್ನು ಪರಿಶೀಲಿಸುವುದಕ್ಕಾಗಿ ಗೂಗಲ್ನಲ್ಲಿ ನಿರ್ದಿಷ್ಟ ಪದಗಳನ್ನು ಹಾಕಿ ಹುಡುಕಲಾಯಿತು. ಆದರೆ, ಯಾವುದೇ ವಿಶ್ವಾಸಾರ್ಹ ಸುದ್ದಿ ಸಿಗಲಿಲ್ಲ. ಒಂದುವೇಳೆ ಇದು ನಿಜವೇ ಆಗಿದ್ದರೆ, ಖಂಡಿತವಾಗಿಯೂ ವರದಿಯಾಗುತ್ತಿತ್ತು. ಇನ್ನಷ್ಟು ಹುಡುಕಾಡಿದಾಗ, ರಾಹುಲ್ ಗಾಂಧಿ ಅವರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದ, ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರಪ್ರಸಾರದ ವಿಡಿಯೊ ಮತ್ತು ಸಮಾರಂಭದ ಹಲವು ಫೋಟೊಗಳು ಸಿಕ್ಕಿದವು. ಅದರಲ್ಲಿ ಒಂದು ಫೋಟೊದ ಹಿನ್ನೆಲೆಯು ಈಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಚಿತ್ರದಲ್ಲಿರುವ ಹಿನ್ನಲೆಯನ್ನೇ ಹೋಲುತ್ತಿತ್ತು.

ಹೀಗಾಗಿ, ಇದು ತಿರುಚಿದ ಚಿತ್ರ ಆಗಿರಬಹುದು ಎಂಬ ಅನುಮಾನ ಬಂತು. ಚಿತ್ರವನ್ನು ಹೈವ್ ಮಾಡರೇಷನ್ ಮತ್ತು ಸೈಟ್ಎಂಜಿನ್ ಎಂಬ ಎಐ ಪತ್ತೆ ಟೂಲ್ಗಳ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ, ಅದು ಎಐ ಸೃಷ್ಟಿ ಎಂಬುದು ದೃಢಪಟ್ಟಿತು ಎಂದು ಪಿಟಿಐ ಫ್ಯಾಕ್ಟ್ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.