ಪಶ್ಚಿಮ ಬಂಗಾಳದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ವಲಸಿಗರು ಭಯದಿಂದ ಓಡಿ ಹೋಗುತ್ತಿದ್ದಾರೆ ಎಂದು ಹೇಳುವ ಹಲವು ಹಳೆಯ ವಿಡಿಯೊಗಳು ಕಳೆದ ಕೆಲವು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಮತ್ತೊಂದು ಇದೇ ರೀತಿಯ ನಕಲಿ ವಿಡಿಯೊ ಹರಿದಾಡುತ್ತಿದ್ದು, ಇದರಲ್ಲಿ ಸಾವಿರಾರು ಜನರು ತಮ್ಮ ಲಗೇಜ್ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಭಾರತ ಚುನಾವಣಾ ಆಯೋಗವು 2025ರ ನವೆಂಬರ್ 4ರಂದು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಆರಂಭಿಸಿತ್ತು. ಈ ಪ್ರಕ್ರಿಯೆಯ ಬಳಿಕ ಅಕ್ರಮ ಬಾಂಗ್ಲಾದೇಶಿ ವಲಸಿಗರು ಭಾರತ ತೊರೆದು ತಮ್ಮ ದೇಶಕ್ಕೆ ಮರಳುತ್ತಿದ್ದಾರೆ ಎಂಬ ದಾವೆಯೊಂದಿಗೆ ಅನೇಕ ವಿಡಿಯೊಗಳನ್ನು ಹಂಚಿಕೊಳ್ಳಲಾಗಿದೆ.

ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘ಮುಂದಿನ ಐದು ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಅವರಿಗೆ ಯಾವ ರೀತಿಯ ‘ಆತಿಥ್ಯ’ ಕಾಯುತ್ತಿದೆ ಎಂದು ತಿಳಿದಿರುವುದರಿಂದ ಅವರು ಹಿಂತಿರುಗುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಆದರೆ ಈ ವಿಡಿಯೊ ಹಳೆಯದು ಹಾಗೂ ಸಂಪೂರ್ಣವಾಗಿ ಬೇರೆ ಘಟನೆಗಳಿಗೆ ಸಂಬಂಧಿಸಿದ್ದವು ಎಂಬುದು ಫ್ಯಾಕ್ಟ್ ಚೆಕ್ನಿಂದ ತಿಳಿದುಬಂದಿದೆ. ಈ ವಿಡಿಯೊ ಬಾಂಗ್ಲಾದೇಶದ ಬಾಗೆರ್ಹಾಟ್ ಜಿಲ್ಲೆಯ ಮಂಗ್ಲಾ ಘಾಟ್ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು, ಇದಕ್ಕೂ ಪಶ್ಚಿಮ ಬಂಗಾಳಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಗೊತ್ತಾಗಿದೆ.

ಸತ್ಯವನ್ನು ತಿಳಿಯಲು ನಾವು ಮೊದಲು ವಿಡಿಯೊದಲ್ಲಿನ ದೃಶ್ಯಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಇದೇ ವಿಡಿಯೊ 2026ರ ಜನವರಿ 6ರಿಂದ ಇಂಟರ್ನೆಟ್ನಲ್ಲಿ ಇರುವುದು ಕಂಡುಬಂದಿದೆ. ಈ ವಿಡಿಯೊ 2026 ಬಿಶ್ವ ಇಸ್ತೆಮಾಗೆ ಸಂಬಂಧಿಸಿದ್ದು ಎಂಬ ಮಾಹಿತಿ ಇದರಲ್ಲಿದೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಇಂಟರ್ನೆಟ್ನಲ್ಲಿ ವಿಡಿಯೊ ಲಭ್ಯವಿದೆ ಎಂಬುದು ಸ್ಪಷ್ಟವಾಗಿದೆ.

ಬಿಶ್ವ ಇಸ್ತೆಮಾ ಎಂಬುದು ಲಕ್ಷಾಂತರ ಮುಸ್ಲಿಮರು ಒಂದೇ ಸ್ಥಳದಲ್ಲಿ ಸೇರುವ ಸಾಮೂಹಿಕ ಪ್ರಾರ್ಥನೆಯ ಶಿಕ್ಷಣ ನೀಡುವ ಕಾರ್ಯಕ್ರಮ. ವರದಿಗಳ ಪ್ರಕಾರ, 2026 ರಲ್ಲಿ ಈ ಕಾರ್ಯಕ್ರಮ ಜನವರಿ 2 ರಿಂದ ಜನವರಿ 5 ರವರೆಗೆ ಪಶ್ಚಿಮ ಬಂಗಾಳದ ಹುಗ್ಲಿ ಜಿಲ್ಲೆಯಲ್ಲಿ ಇರುವ ಪುಯಿನಾನ್ ಪ್ರದೇಶದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಮುಸ್ಲಿಮರು ಆಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.