7

ಎಪಿಎಂಸಿ: 70 ನಾಮಪತ್ರ

Published:
Updated:

ಮದ್ದೂರು: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಒಟ್ಟು 70 ನಾಮಪತ್ರಗಳು ಸಲ್ಲಿಕೆಯಾಗಿವೆ.ವರ್ತಕರ ಕ್ಷೇತ್ರದಿಂದ 7ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಸಬಾ ಕ್ಷೇತ್ರದಿಂದ 4, ಕೊಪ್ಪ ಕ್ಷೇತ್ರದಿಂದ 18, ಬೆಸಗರಹಳ್ಳಿ ಕ್ಷೇತ್ರದಿಂದ 12, ಆತಗೂರು ಕ್ಷೇತ್ರದಿಂದ 15, ಚಿಕ್ಕರಸಿನಕೆರೆ ಕ್ಷೇತ್ರದಿಂದ 8, ಭಾರತಿ ನಗರ ಕ್ಷೇತ್ರದಿಂದ 6 ಮಂದಿ ಸೇರಿದಂತೆ ಕೃಷಿಕರ ಕ್ಷೇತ್ರದಿಂದ ಒಟ್ಟು 63 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 5ರಂದು ನಾಮಪತ್ರ ಪಡೆಯಲು ಕೊನೆಯ ದಿನವಾಗಿದೆ ಎಂದು ಚುನಾವಣಾಧಿಕಾರಿ ಚಂದ್ರಶೇಖರಯ್ಯ ತಿಳಿಸಿದರು. ಉಪಚುನಾವಣಾಧಿಕಾರಿ ಕೇಶವಮೂರ್ತಿ, ಎಪಿಎಂಸಿ ಕಾರ್ಯ ದರ್ಶಿ ಆನಂದ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry