ನವದೆಹಲಿ: ವಾರದಲ್ಲಿ ಎರಡು ದಿನ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ (ವರ್ಕ್ ಫ್ರಂ ಹೋಮ್) ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಸರ್ಕಾರಿ ಕಚೇರಿಗಳಿಗೆ ಗುರುವಾರ ಆದೇಶ ಹೊರಡಿಸಿದ್ದಾರೆ.

ಸಚಿವರು ಮತ್ತು ಅಧಿಕಾರಿಗಳು ಮೆಟ್ರೊ ರೈಲಿನಲ್ಲಿಯೇ ಸೋಮವಾರ ಪ್ರಯಾಣಿಸಬೇಕು. ನಾಗರಿಕರು ಪ್ರತಿ ವಾರವೂ ಸ್ವಯಂ ಪ್ರೇರಿತವಾಗಿ ‘ವಾಹನರಹಿತ ದಿನ’ವೆಂದು ಪರಿಗಣಿಸಬೇಕು ಎಂದೂ ರೇಖಾ ಸೂಚಿಸಿದ್ದಾರೆ.

ಇಂಧನ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮನವಿ ಮಾಡಿರುವುದನ್ನು ಪರಿಗಣಿಸಿ ‘ಮೇರಾ ಭಾರತ್, ಮೇರಾ ಯೋಗದಾನ್’ ಎಂಬ ಉಪಕ್ರಮದಡಿ ಹಲವು ಕ್ರಮಗಳನ್ನು ರೂಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ರೇಖಾ ಹೇಳಿದ್ದಾರೆ.

ರೇಖಾ ಅವರು ತಮ್ಮ ಬೆಂಗಾವಲು ವಾಹನಗಳ ಪೈಕಿ ಶೇ 60ರಷ್ಟು ವಾಹನಗಳನ್ನು ಕಡಿತಗೊಳಿಸಿದ್ದಾರೆ.

ಸಿ.ಎಂ ರೇಖಾ ಗುಪ್ತಾ ಕೈಗೊಂಡಿರುವ ಕ್ರಮಗಳು

* ದೆಹಲಿಯ ಎಲ್ಲಾ ಸರ್ಕಾರಿ ಕಚೇರಿಗಳ ಉದ್ಯೋಗಿಗಳು ವಾರದಲ್ಲಿ ಎರಡು ದಿನ ಮನೆಯಿಂದಲೇ ಕೆಲಸ ಮಾಡಲಿದ್ದಾರೆ. ಖಾಸಗಿ ವಲಯಕ್ಕೂ ಈ ಕ್ರಮವನ್ನು ಅನುಸರಿಸಲು ವಿನಂತಿಸಲಾಗುವುದು * ಎಲ್ಲಾ ಸಚಿವರು ಅಧಿಕಾರಿಗಳು ಹಾಗೂ ಸ್ವತಃ ತಾವೂ ಸೋಮವಾರ ಮೆಟ್ರೊದಲ್ಲಿ ಪ್ರಯಾಣಿಸುವುದಾಗಿ ರೇಖಾ ಹೇಳಿದ್ದಾರೆ * ನಾಗರಿಕರು ಪ್ರತಿ ವಾರವೂ ಸ್ವಯಂ ಪ್ರೇರಿತವಾಗಿ ‘ವಾಹನ ರಹಿತ ದಿನ’ವನ್ನಾಗಿ ಅನುಸರಿಸಲು ಪ್ರೋತ್ಸಾಹಿಸಲಾಗುವುದು * ಸಚಿವರ ಎಲ್ಲಾ ಅಧಿಕೃತ ವಿದೇಶ ಪ್ರವಾಸಗಳನ್ನು ಒಂದು ವರ್ಷದವರೆಗೆ ಸ್ಥಗಿತಗೊಳಿಸಲಾಗಿದೆ. ಮುಂದಿನ ಮೂರು ತಿಂಗಳು ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ * ದೆಹಲಿಯ ಸರ್ಕಾರಿ ಅಧಿಕಾರಿಗಳ ತಿಂಗಳ ಪೆಟ್ರೊಲ್ ಡೀಸೆಲ್ ಕೋಟಾದಲ್ಲಿ ಶೇ 20ರಷ್ಟು ಕಡಿತ ಮಾಡಲಾಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.